ತಂತ್ರಜ್ಞಾನ ಮತ್ತು ಇಂಟರ್ನೆಟ್ ನಮ್ಮ ಜೀವನದಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುವ ಈ ಸಮಯದಲ್ಲಿ ಮಹಿಳೆಯರು ಸೈಬರ್ ಲೋಕದಲ್ಲಿ ಹಿಂಸೆಗೆ ಒಳಗಾಗುವ ಅಪಾಯವಿದೆ. ಒಬ್ಬ ಮಹಿಳೆಗೆ ಇಂಟರ್ನೆಟ್ ಅನ್ನು ಬಳಸಿ, ಸಂವಾದಾತ್ಮಕ ಡಿಜಿಟಲ್ ತಂತ್ರಜ್ಞಾನಗಳು ಅಥವಾ ಮೊಬೈಲ್ ಫೋನ್ಗಳ ಮೂಲಕ ಇನ್ನೊಬ್ಬ ವ್ಯಕ್ತಿಯು ಬೆದರಿಕೆ ಹಾಕುವುದನ್ನು, ಕಿರುಕುಳ, ಅವಮಾನಗೊಳಿಸುವುದನ್ನು ಅಥವಾ ಗುರಿಪಡಿಸುವುದನ್ನು "ಸೈಬರ್ ಬೆದರಿಸುವಿಕೆ" ಎನ್ನಲಾಗುತ್ತದೆ. ಸಾಮಾಜಿಕ ಮಾಧ್ಯಮದ ಪ್ರೊಫೈಲ್ಗಳು ಅವರು ಬಯಸುವ ಯಾವುದೇ ಚಿತ್ರಗಳನ್ನು ಪೋಸ್ಟ್ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ಅವರು ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಬಹುದು, ತಮ್ಮ ಆಸಕ್ತಿಯ ಬಗ್ಗೆ ಮಾಹಿತಿ ಅಥವಾ ತಮ್ಮ ಇರುವಿಕೆಯ  ಬಗೆಗಿನ ಅಪ್ಡೇಟ್ ಗಳು ಆ ವ್ಯಕ್ತಿಯ ಜೀವನದ ಕೆಲವು ಅಂಶಗಳನ್ನು ಇತರರು ಗುರುತಿಸಿ ಅಪಹಾಸ್ಯಮಾಡುವ, ಅವಕಾಶವನ್ನು ಸೈಬರ್ ಬುಲ್ಲಿಗೆ ನೀಡುತ್ತದೆ.

ಸೈಬರ್ ಬೆದರಿಸುವಿಕೆಯು ಅಷ್ಟು ಅಪಾಯಕಾರಿ ಎಂದು ಏಕೆ ಪರಿಗಣಿಸಲಾಗಿದೆ ಎಂದರೆ, ಅದು ಬುಲ್ಲಿಗಳಿಗೆ, ಅನೇಕ ವಿಭಿನ್ನ ರೀತಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು,  ದಿನದ ಯಾವುದೇ ಘಂಟೆಯಲ್ಲಿ ಸಾರ್ವಜನಿಕವಾಗಿ ಯಾರನ್ನು ಬೇಕಾದರೂ ಮುಜುಗರಗೊಳಿಸುವ ಸಾಮರ್ಥ್ಯವನ್ನು ನೀಡುತ್ತದೆ. ಇನ್ಸ್ಟೆಂಟ್ ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ಗಳು, ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಸಂವಾದಾತ್ಮಕ ಗೇಮಿಂಗ್ ವೆಬ್ಸೈಟ್ಗಳು, ಮತ್ತು ಹಾಗೂ  ಈ ಮೆಲ್ ಗಳ ಮುಖಾಂತರವೂ ಬೆದರಿಕೆಯನ್ನು ಮಾಡಬಹುದಾಗಿದೆ.

ಸೈಬರ್ ಬೆದರಿಕೆಯ ವಿವಿಧ ಮಾರ್ಗಗಳು

ಇತರರಿಗೆ ಖಾಸಗಿ IM (ಇನ್ಸ್ಟೆಂಟ್ ಮೆಸೇಜ್ ಗಳು) ಸಂವಹನವನ್ನು ಫಾರ್ವರ್ಡ್ ಮಾಡುವುದು.

ಮಹಿಳೆಯರು ಮತ್ತೊಂದು ಮಹಿಳಾ ಹೆಸರನ್ನು ಹೋಲುವ ಸ್ಕ್ರೀನ್  ಹೆಸರನ್ನು ರಚಿಸಬಹುದು. ಆ ಹೆಸರು ಹೆಚ್ಚುವರಿ  " ಐ"  ಅಥವಾ ಕಡಿಮೆ "ಇ" ಹೊಂದಿರಬಹುದು. ಬೇರೊಬ್ಬ ಬಳಕೆದಾರರಂತೆ ಸೋಗು ಹಾಕಿ ಅವರು ಇತರ ಬಳಕೆದಾರರಿಗೆ ಅನುಚಿತ ವಿಷಯಗಳನ್ನು ಹೇಳಲು ಈ ಹೆಸರನ್ನು ಬಳಸಬಹುದು.

ಸೈಬರ್ ಅಪರಾಧಿಗಳು ತಮ್ಮ ಖಾಸಗಿ ಸಂವಹನವನ್ನು ಇತರರಿಗೆ ಫಾರ್ವರ್ಡ್ ಮಾಡಿ ಅವರ ಖಾಸಗಿ ಸಂಪರ್ಕವನ್ನು ಇತರರಿಗೆ ಹರಡಬಹುದು.

ಇಂಟರ್ನೆಟ್ ಚಾಟ್ ಕೊಠಡಿಗಳಿಗೆ ಸಂಬಂಧಿಸಿದ ಬಳಕೆದಾರರ ಅನುಮತಿಯಿಲ್ಲದೆ ನಿಮ್ಮ ಅಥವಾ ಇತರರನ್ನು ಖಾಸಗಿ ಸಂವಹನಗಳನ್ನು ಎಂದಿಗೂ ಫಾರ್ವರ್ಡ್ ಅಥವಾ ಹಂಚಿಕೊಳ್ಳಬೇಡಿ.

ವದಂತಿಗಳನ್ನು ಹರಡಲು ಬೇರೆಯವರ ಸೋಗು ಹಾಕಬೇಡಿ.

ವದಂತಿಗಳನ್ನು ಹರಡಲು ಅಥವಾ ಇನ್ನೊಬ್ಬ ಮಹಿಳೆಯರಿಗೆ ಹಾನಿಯನ್ನುಂಟುಮಾಡಲು ಗಾಸಿಪ್ ಮೇಲ್ಗಳು ಅಥವಾ ನಕಲಿ ಮೇಲ್ಗಳನ್ನು ಫಾರ್ವರ್ಡ್ ಮಾಡಲಾಗುತ್ತದೆ. ಅವರು ಬಲಿಪಶುವಾಗಿ ತಮ್ಮನ್ನು ತಾವು ಗುರುತಿಸಿಕೊಂಡು, ಚಾಟ್ ರೂಂ ನ ದ್ವೇಷದ ಗುಂಪಿನಲ್ಲಿ ಪ್ರಚೋದನಕಾರಿ ಸಂದೇಶವನ್ನು ಪೋಸ್ಟ್ ಮಾಡಿ, ವಿಕ್ಟಿಮ್ ನ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಿ ಬಲಿಪಶುವಿನ ಮೇಲೆ ಆಕ್ರಮಣವನ್ನು ಆಹ್ವಾನಿಸಿ, ದ್ವೇಷದ ಗುಂಪಿನ ಕೆಲಸವನ್ನು ಸುಲಭಗೊಳಿಸಲಾಗುತ್ತದೆ.

ಇನ್ನೊಬ್ಬ ವ್ಯಕ್ತಿಯಂತೆ ಸೋಗು ಹಾಕಿ ಯಾವುದೇ ದ್ವೇಷದ ಮೇಲ್ ಗಳನ್ನು ಅಥವಾ ಮತ್ತು  ವದಂತಿಗಳನ್ನು ಈ ಮೇಲ್ ಅಥವಾ ಮೊಬೈಲ್ ಅನ್ನು ಬಳಸಿ  ಹರಡಬೇಡಿ.

ಮುಜುಗರಗೊಳಿಸುವ ಫೋಟೋಗಳು ಅಥವಾ ವೀಡಿಯೊವನ್ನು ಪೋಸ್ಟ್ ಮಾಡುವುದು.

ಬಚ್ಚಲು ಮನೆ ಅಥವಾ ಡ್ರೆಸ್ಸಿಂಗ್ ಕೋಣೆಯಲ್ಲಿ ಮಹಿಳೆಯರ ಚಿತ್ರ ಅಥವಾ ವಿಡಿಯೋವನ್ನು ತೆಗೆದು, ಅದನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡುಬಹುದು ಅಥವಾ ಸೆಲ್ ಫೋನ್ಗಳಲ್ಲಿ ಇತರರಿಗೆ ಕಳುಹಿಸಬಹುದು.

ಸರಿಯಾದ ಮಾರ್ಗಸೂಚಿಗಳಿಲ್ಲದೆ ಬೇರೆಯವರ ಅಥವಾ ನಿಮ್ಮ  ಚಿತ್ರಗಳನ್ನು / ವೀಡಿಯೊಗಳನ್ನು ಎಂದಿಗೂ ಪೋಸ್ಟ್ ಮಾಡಬೇಡಿ.

ವೆಬ್ಸೈಟ್ಗಳು ಅಥವಾ ಬ್ಲಾಗ್ಗಳನ್ನು ಬಳಸುವುದು

ಮಹಿಳೆಯರು ಕೆಲವೊಮ್ಮೆ ಮತ್ತೊಂದು ಮಹಿಳೆಗೆ ಅವಮಾನ ಅಥವಾ ಅಪಾಯವನ್ನು ಉಂಟುಮಾಡುವ ವೆಬ್ ಸೈಟ್ಗಳನ್ನು ಅಥವಾ ಬ್ಲಾಗ್ಗಳನ್ನು ರಚಿಸುತ್ತಾರೆ ಅವರು ಮತ್ತೊಂದು ಮಹಿಳೆ ಅಥವಾ ಗುಂಪನ್ನು ಅವಮಾನಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ ಪುಟಗಳನ್ನು ರಚಿಸುತ್ತಾರೆ.

ಎರಡೂ ಸ್ಥಳಗಳಲ್ಲಿ ಇತರರನ್ನು ಅವಮಾನಿಸುವುದು ಉತ್ತಮ ಶಿಷ್ಟಾಚಾರವಲ್ಲ ಹಾಗೂ ಅದನ್ನು ಎಂದಿಗೂ ಮಾಡಬೇಡಿ.

ಸೆಲ್ ಫೋನ್ಗಳ ಮೂಲಕ ಅವಮಾನಕರ ಸಂದೇಶಗಳನ್ನು ಕಳುಹಿಸುವುದು.

ಬಲಿಪಶು ವಿಕ್ಟಿಮ್ ನ ಮೇಲೆ ಮಹಿಳೆಯರು ಗುಂಪುಗಾರಿಕೆ ಮಾಡಿ, ಬಲಿಪಶುವಿನ ಸೆಲ್ ಫೋನ್ ಅಥವಾ ಇತರ ಮೊಬೈಲ್ ಫೋನ್ಗಳಿಗೆ ದ್ವೇಷ ಸಂದೇಶಗಳಿಗೆ ಸಂಬಂಧಿಸಿದ ಸಾವಿರಾರು ಪಠ್ಯ-ಸಂದೇಶಗಳನ್ನು ಕಳುಹಿಸುವುದನ್ನು ಸಂದೇಶ ಯುದ್ಧಗಳು ಅಥವಾ ಸಂದೇಶ ದಾಳಿಗಳು ಎನ್ನಲಾಗುತ್ತದೆ.

ಸೆಲ್ ಫೋನ್ ಮೂಲಕ ಮಗು ಅಥವಾ ಹದಿಹರೆಯದವರನ್ನು ಅವಮಾನಿಸುವುದಕ್ಕೆ ಸಂಬಂಧಿಸಿದ ಸಂದೇಶಗಳನ್ನು ಎಂದಿಗೂ ಕಳಿಸಬೇಡಿ. ಇದು ನಿಮ್ಮ ಕುಟುಂಬದ ಹಣವನ್ನು ತೆತ್ತುವಂತೆ  ಮಾಡಬಲ್ಲದು ಅದರ ಜೊತೆಗೆ ಅದನ್ನು ಕ್ರಿಮಿನರ್ ಅಪರಾಧಕ್ಕೆ ಕೂಡ ನಿಮ್ಮನ್ನು ಸಿಕ್ಕಿಸಬಹುದು.

ಇನ್ನೊಬ್ಬರಿಗೆ ನೋವನ್ನುಂಟುಮಾಡಲು, ಇ-ಮೇಲ್ ಅಥವಾ ಮೊಬೈಲ್ ಮೂಲಕ ಬೆದರಿಕೆ ಇ-ಮೇಲ್ಗಳು ಮತ್ತು ಚಿತ್ರಗಳನ್ನು ಕಳುಹಿಸುವುದು.

ನೈಜ ಜೀವನದಲ್ಲಿ ಹೇಳಲಾಗದಿದ್ದರೂ, ಕ್ರೂರ ಅಥವಾ ಬೆದರಿಕೆ ಸಂದೇಶಗಳು ನೋವುಂಟುಮಾಡುತ್ತದೆ ಮತ್ತು ಅತಿ ಗಂಭೀರವಾದದ್ದು ಎಂಬ ಅರಿವಿಲ್ಲದೆ, ಕ್ರಿಮಿನಲ್ಗಳು ಮಹಿಳೆಯರಿಗೆ ದ್ವೇಷ ಅಥವಾ ಬೆದರಿಕೆ ಸಂದೇಶಗಳನ್ನು ಕಳುಹಿಸಬಹುದು.

ಇಂಟರ್ನೆಟ್ ಅಥವಾ ಮೊಬೈಲ್ ಸಂವಹನಗಳ ಮೂಲಕ ಯಾರನ್ನಾದರೂ ಬೆದರಿಸಬೇಡಿ. ನೀವು ಬೆದೈಸುವ ವಿಕ್ಟಿಮ್ ಮಗು / ಹದಿಹರೆಯದವರಾಗಿರಬಹುದು. ಅಡು ಅವರಿಗೆ ನೋವುಂಟುಮಾಡಬಹುದು ಹಾಗೂ ಅವರನ್ನು ಖಿನ್ನತೆಗೆದೂಡಿ ಅವರ ಮರಣಕ್ಕೂ ಕಾರಣವಾಗಬಹುದು.

ಸೈಬರ್ ಬೆದರಿಕೆಯ ಪರಿಣಾಮ

  • ಸೈಬರ್ ಬೆದರಿಸುವಿಕೆ ಯಾವುದೇ ವ್ಯಕ್ತಿಯ ಮೇಲೆ ಹಲವಾರು ವಿಧಗಳಲ್ಲಿ ಪ್ರಮುಖ ಪ್ರಭಾವವನ್ನು ಬೀರುತ್ತದೆ. ಕೆಲವನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
  •  ಭಾವನಾತ್ಮಕ ತೊಂದರೆ: ಕೋಪ, ನಿರಾಶೆ, ಅವಮಾನ, ದುಃಖ, ಭಯ, ಖಿನ್ನತೆ
  •  ಶಾಲಾ ಕೆಲಸ ಅಥವಾ ಕೆಲಸದ ನಿರ್ವಹಣೆಗೆ ಹಸ್ತಕ್ಷೇಪ
  •  ಕೆಲಸವನ್ನು ಬಿಟ್ಟು ಬಿಡುವಂತಹ, ಡ್ರಾಪ್ ಔಟ್ ಮಾಡುವಂತಹ ಅಥವಾ ಶಾಲೆಗಳನ್ನು ಬದಲಾಯಿಸುವಂತಹ ಪರಿಸ್ಥಿತಿ.
  •  ಅಪರಾಧ ಮತ್ತು ಹಿಂಸೆ
  • ಮಾದಕ ವಸ್ತುವಿನ ಸೇವನೆ
  •  ಶಾಲೆಯಲ್ಲಿ ಮೇಲೆ ಶಸ್ತ್ರಾಸ್ತ್ರಗಳನ್ನು ಬಳಸುವುದು.
  •  ಆತ್ಮಹತ್ಯೆ

ಭಾರತದಲ್ಲಿ ಸೈಬರ್ ಬೆದರಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನು ಇಲ್ಲ, ಆದರೆ ಐಟಿ ಆಕ್ಟ್ 67 ನಂತಹ ನಿಬಂಧನೆಗಳು ಇಂತಹ ವಿಷಯಗಳೊಂದಿಗೆ ಭಾಗಶಃ ವ್ಯವಹರಿಸಬಹುದು.

Page Rating (Votes : 3)
Your rating: