ನಾವು "ನೈತಿಕತೆ" ಬಗ್ಗೆ ಮಾತನಾಡುವಾಗ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಹೊಂದಿರುವ ವರ್ತನೆ, ಮೌಲ್ಯಗಳು, ನಂಬಿಕೆಗಳು ಮತ್ತು ಪದ್ಧತಿಗಳನ್ನು ನಾವು ಉಲ್ಲೇಖಿಸುತ್ತೇವೆ.  ನೈತಿಕತೆಯು ನೀತಿಶಾಸ್ತ್ರದ ಅಧ್ಯಯನವಾಗಿದೆ. ಅಂತರ್ಜಾಲ ನೈತಿಕ ಸಮಸ್ಯೆಗಳು ಎಲ್ಲಾ ವೈಯಕ್ತಿಕ, ಸಾಮಾಜಿಕ ಮತ್ತು ಜಾಗತಿಕ ಸಮಸ್ಯೆಗಳ ತತ್ವಗಳೊಂದಿಗೆ ವ್ಯವಹರಿಸುತ್ತದೆ. ಸರಳವಾಗಿ ಹೇಳುವುದಾದರೆ, ಕಂಪ್ಯೂಟರ್ ನೈತಿಕತೆಯು ಕಂಪ್ಯೂಟರ್ಗಳ ಬಳಕೆಯನ್ನು ನಿಯಂತ್ರಿಸುವ ನೈತಿಕ ತತ್ವಗಳ ಒಂದು ಗುಂಪಾಗಿದೆ. ಈ ಗುಂಪು ಕಂಪ್ಯೂಟರ್ ಅನ್ನು ಬಳಸುವಾಗ ಸ್ವೀಕಾರಾರ್ಹ ನಡವಳಿಕೆಯ ಬಗ್ಗೆ ವ್ಯಕ್ತಿ ಅಥವಾ ಗುಂಪನ್ನು ನಿಯಂತ್ರಿಸುವ ನೈತಿಕ ತತ್ವಗಳಾಗಿದೆ. ನಮಗೆಲ್ಲಾರಿಗೂ ತಿಳಿದಿರುವಂತೆ, ಕಂಪ್ಯೂಟರ್ ಪರಿಣಾಮಕಾರಿ ತಂತ್ರಜ್ಞಾನವಾಗಿದ್ದು, ವೈಯಕ್ತಿಕ ಉಲ್ಲಂಗನೆ, ವಂಚನೆ, ಗೌಪ್ಯತೆಯ ಉಲ್ಲಂಘನೆ, ಅಂತರ್ಜಾಲದಲ್ಲಿ-ಬೆದರಿಸುವಿಕೆ, ಅಂತರ್ಜಾಲದಲ್ಲಿ -ಹಿಂಬಾಲಿಕೆ, ಮಾನನಷ್ಟ, ಪಲಾಯನದ  ತಂತ್ರಜ್ಞಾನ ಅಥವಾ ಸಾಮಾಜಿಕ ಜವಾಬ್ದಾರಿ ಮತ್ತು ಬೌದ್ಧಿಕ  ಹಕ್ಕುಗಳು ಅಂದರೆ ಹಕ್ಕುಸ್ವಾಮ್ಯದ ವಿದ್ಯುನ್ಮಾನ ವಿಷಯಗಳಂತಹ ನೈತಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.

ಪ್ರತಿಯೊಬ್ಬರಿಗೂ ಸಂಬಂಧಿಸುವ ನೈತಿಕತೆ

ಅಂಗೀಕಾರ

ಅಂತರ್ಜಾಲವು ಮೌಲ್ಯ ಮುಕ್ತ ವಲಯವಲ್ಲ ಎಂಬುದನ್ನು ಎಲ್ಲರೂ ಅಂಗೀಕರಿಸಬೇಕು. ಇದರರ್ಥ ವರ್ಲ್ಡ್ ವೈಡ್ ವೆಬ್ ಎಂಬುದು ಮೌಲ್ಯಗಳನ್ನು ವಿಶಾಲವಾದ ಅರ್ಥದಲ್ಲಿ ಪರಿಗಣಿಸಲ್ಪಡುವ ಒಂದು ಸ್ಥಳವಾಗಿದೆ. ಆದ್ದರಿಂದ ವಿಷಯ ರಚಿಸುವಾಗ ಮತ್ತು ಸೇವೆಗಳನ್ನು ನೀಡುವಾಗ ನಾವು ಕಾಳಜಿಯನ್ನು ವಹಿಸಬೇಕಾಗುತ್ತದೆ ಮತ್ತು ನಾವು ಅಂತರ್ಜಾಲವು ಸಾರ್ವತ್ರಿಕ ಸಮಾಜಕ್ಕೆ ಹೊರತಲ್ಲವೆಂದು ಹಾಗೂ  ಅದು ಅದರ ಪ್ರಾಥಮಿಕ ಅಂಶವಾಗಿದೆ ಎಂಬುದನ್ನು ಗುರುತಿಸಬೇಕು.

ರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಕೃತಿಗಳಿಗೆ ಸಂವೇದನೆ

ಅದು ಎಲ್ಲರಿಗೂ ಸೇರಿದ್ದು ಮತ್ತು ಅದಕ್ಕೆ ರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಕೃತಿಯ ಯಾವುದೇ ತಡೆ ಇರುವುದಿಲ್ಲ. ಸ್ಥಳೀಯ ಟಿವಿ ಚಾನೆಲ್ ಅಥವಾ ಸ್ಥಳೀಯ ವಾರ್ತಾಪತ್ರಿಕೆ ಮುಂತಾದವುಗಳಂತೆ  ಒಂದು ಗುಂಪಿನ  ಮೌಲ್ಯಗಳಡಿಯಲ್ಲಿರುವುದಿಲ್ಲ ಹಾಗೂ ನಾವು ಬಹುವಿಧದ ಬಳಕೆಗೆ ಅವಕಾಶ ಕಲ್ಪಿಸಬೇಕಿರುತ್ತದೆ.

ಇ-ಮೇಲ್ ಮತ್ತು ಚಾಟ್ ಮಾಡುವಾಗ

ಕುಟುಂಬ ಮತ್ತು ಗೆಳೆಯರೊಂದಿಗೆ  ಸಂಪರ್ಕಕ್ಕಾಗಿ ಇಂಟರ್ನೆಟ್ ಅನ್ನು ಬಳಸಬೇಕು. ಅಪರಿಚಿತರೊಂದಿಗೆ ಚಾಟ್ ಮಾಡುವುದು ಗೊತ್ತಿಲ್ಲದ ಜನರಿಂದ / ಅಪರಿಚಿತರಿಂದ ಇ-ಮೇಲ್ಗಳನ್ನು ಫಾರ್ವರ್ಡ್ ಮಾಡುವುದನ್ನು ತಪ್ಪಿಸಬೇಕು.  ಅಪರಿಚಿತರೊಂದಿಗೆ ಚಾಟ್ ಮಾಡುವುಡು ಮತ್ತು ಈ-ಮೇಲ್ ಫಾರ್ವರ್ಡ್ ಮಾಡುವುದರಿಂದ ಉಂಟಾಗುವ ಅಪಾಯಗಳನ್ನು ನಾವು ತಿಳಿದಿರಲೇಬೇಕು.

ಬೇರೊಬ್ಬರಂತೆ ಸೋಗುಹಾಕುವುದು

ಬೇರೊಬ್ಬರಂತೆ ನಟಿಸುವುದರ ಮೂಲಕ ಇತರರನ್ನು ಮೋಸಗೊಳಿಸಲು ನಾವು ಅಂತರ್ಜಾಲವನ್ನು ಬಳಸಬಾರದು. ಇಂಟರ್ನೆಟ್ ಜಗತ್ತಿನಲ್ಲಿ ಇತರರನ್ನು ಮೋಸಗೊಳಿಸಲು ನಮ್ಮ ಸ್ವಂತ ಗುರುತನ್ನು ಅಡಗಿಸಿಟ್ಟುಕೊಳ್ಳುವುದು ಒಂದು ಅಪರಾಧ ಮತ್ತು ಇತರರಿಗೆ ಇದು ಅಪಾಯವೂ ಆಗಿರಬಹುದು.

ಅವ್ಯಾಚ್ಯ ಶಬ್ದ ಬಳಕೆಯನ್ನು ತಪ್ಪಿಸಬೇಕು

ಇ-ಮೇಲ್, ಚಾಟಿಂಗ್, ಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್ವರ್ಕಿಂಗ್ನಲ್ಲಿ ನಾವು ಅಸಭ್ಯ ಅಥವಾ ಕೆಟ್ಟ ಭಾಷೆಯನ್ನು ಬಳಸಬಾರದು; ನಾವು ಇತರರ ಅಭಿಪ್ರಾಯಗಳನ್ನು ಗೌರವಿಸಬೇಕು ಮತ್ತು ಇಂಟರ್ನೆಟ್ನಲ್ಲಿ ಯಾರನ್ನೂ ಟೀಕಿಸಬಾರದು.

ವೈಯಕ್ತಿಕ ಮಾಹಿತಿಯನ್ನು ಮರೆಮಾಚಿರಿ.

ನಾವು ಮನೆ ವಿಳಾಸ, ಫೋನ್ ಸಂಖ್ಯೆಗಳು, ಆಸಕ್ತಿಗಳು, ಪಾಸ್ವರ್ಡ್ಗಳಂತಹ ವೈಯಕ್ತಿಕ ವಿವರಗಳನ್ನು ನೀಡಬಾರದು. ಯಾವುದೇ ಛಾಯಾಚಿತ್ರಗಳನ್ನು ಅಪರಿಚಿತರಿಗೆ ಕಳುಹಿಸಬಾರದು ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ನಿಮಗೆ ಅರಿವಿಲ್ಲದಂತೆ ಇತರರೊಂದಿಗೆ ಹಂಚಿಕೊಳ್ಳಬಹುದು.

ಡೌನ್ಲೋಡ್ ಮಾಡುವಾಗ

ಅಂತರ್ಜಾಲವನ್ನು ವೀಡಿಯೊಗಳನ್ನು ವೀಕ್ಷಿಸಲು ಮತ್ತು ಆಟಗಳನ್ನು ಆಡಲು, ಬ್ರೌಸ್ ಮಾಡಲು ಅಥವಾ ಡೌನ್ಲೋಡ್ ಮಾಡಲು ಕೂಡ ಬಳಸಲಾಗುತ್ತದೆ. ಕೃತಿಸ್ವಾಮ್ಯದ ಹಕ್ಕುಗಳು ಮತ್ತು ಹಕ್ಕುಸ್ವಾಮ್ಯದ ವಿಷಯಗಳ ಮಹತ್ವವನ್ನು ನಾವು ತಿಳಿದಿರಬೇಕು.

ಇಂಟರ್ನೆಟ್ ಪ್ರವೇಶ

ಪಠ್ಯಕ್ರಮದ ಬೆಳವಣಿಗೆಯ ಸಾಧ್ಯತೆಗಳನ್ನು ವಿಸ್ತರಿಸುವ ಪ್ರತಿಯೊಬ್ಬರಿಗೂ ಅಂತರ್ಜಾಲ ಸಮಯ-ಸಮರ್ಥ ಸಾಧನವಾಗಿದೆ. ಕಲಿಯುವಿಕೆಯು, ಸಂಬಂಧಿತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯುವ ಸಾಮರ್ಥ್ಯದ ಮೇಲೆ ಹಾಗೂ ಆ ಮಾಹಿತಿಯನ್ನು ಆಯ್ಕೆಮಾಡಿ ಮತ್ತು ಅರ್ಥಮಾಡಿಕೊಳ್ಳುವುದರ ಮೇಲೆ  

ಅವಲಂಬಿತವಾಗಿರುತ್ತದೆ. ಅಂತರ್ಜಾಲದಲ್ಲಿನ ಮಾಹಿತಿಗಾಗಿ ಹುಡುಕುವುದು, ಈ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ತರಗತಿಯ ಲೆಕ್ಕಗಳು ಮತ್ತು  ಮನೆ ಕೆಲಸದ  ಅಸೆಸ್ಮೆಂಟ್ ಕಾರ್ಯಗಳನ್ನು ಮಾಡಲು ವೆಬ್ಸೈಟ್ ವಿಷಯವನ್ನು ಹೋಲಿಸುವುದು ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು, ವಿವಿಧ ಪ್ರೇಕ್ಷಕರಿಗೆ ತಕ್ಕಂತೆ ಬರೆಯುವ ಅಗತ್ಯತೆಗಳಿಗೆ, ನಿರ್ದಿಷ್ಟ ವಿಷಯದ ಉದ್ದೇಶ, ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಗುರುತಿಸುವುದು ಮತ್ತು ತೀರ್ಮಾನಿಸುವುದರ ಬಗ್ಗೆ  ವಿದ್ಯಾರ್ಥಿಗಳನ್ನು ಎಚ್ಚರಿಸುವುದು ಸೂಕ್ತ. ಅನೇಕ ವೆಬ್ ಸೈಟ್ಗಳು ಸಮಸ್ಯೆಗಳ ಬಗ್ಗೆ ನಿರ್ದಿಷ್ಟ ದೃಷ್ಟಿಕೋನಗಳನ್ನು ಹೊಂದಿರುತ್ತದೆಯಾದ್ದರಿಂದ, ಅಭಿಪ್ರಾಯದಿಂದ ಸತ್ಯತೆಯನ್ನು ಪ್ರತ್ಯೆಕಿಸುವ  ಕೌಶಲಗಳನ್ನು ಅಭಿವೃದ್ಧಿಪಡಿಸಲು ಮತ್ತು ವ್ಯಕ್ತಿನಿಷ್ಠತೆ ಮತ್ತು ವಸ್ತುನಿಷ್ಠತೆಯನ್ನು ಅನ್ವೇಷಿಸಲು ಇಂಟರ್ನೆಟ್ ಒಂದು ಉಪಯುಕ್ತ ಸಾಧನವಾಗಿದೆ.

ಇಂಟರ್ನೆಟ್ ಬಳಕೆದಾರರಿಗೆ ನೈತಿಕ ನಿಯಮಗಳು

ಕಂಪ್ಯೂಟರ್ ಅನ್ನು ಬಳಸುವಾಗ ವ್ಯಕ್ತಿಗಳು ಅನುಸರಿಸಬೇಕಾದ ಕೆಲವು ನಿಯಮಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • ಇತರೆ ಬಳಕೆದಾರರಿಗೆ ಹಾನಿ ಮಾಡಲು ಇಂಟರ್ನೆಟ್ ಅನ್ನು ಬಳಸಬಾರದು.
  • ಇತರರ ಮಾಹಿತಿಯನ್ನು ಕದಿಯಲು ಇಂಟರ್ನೆಟ್ ಅನ್ನು ಬಳಸಬೇಡಿ.
  •  ಮಾಲೀಕರ ಅನುಮತಿಯಿಲ್ಲದೆ ಫೈಲ್ಗಳಿಗೆ ಪ್ರವೇಶಿಸಬೇಡಿ.
  •  ಲೇಖಕರ ಅನುಮತಿಯಿಲ್ಲದೆ ಹಕ್ಕುಸ್ವಾಮ್ಯದ ಸಾಫ್ಟ್ವೇರ್ ಅನ್ನು ನಕಲಿಸಬೇಡಿ.
  •  ಹಕ್ಕುಸ್ವಾಮ್ಯ ಕಾನೂನುಗಳು ಮತ್ತು ನೀತಿಗಳನ್ನು ಸದಾ ಗೌರವಿಸಿ.
  •  ಇತರರಿಂದ ನೀವು ನಿರೀಕ್ಷಿಸಿದಂತೆ ಇತರರ ಗೌಪ್ಯತೆಯನ್ನು ಗೌರವಿಸಿ.
  •  ಇತರ ಬಳಕೆದಾರರ ಕಂಪ್ಯೂಟರ್ ಸಂಪನ್ಮೂಲಗಳನ್ನು ಅವರ ಅನುಮತಿಯಿಲ್ಲದೆ ಬಳಸಬೇಡಿ.
  •  ಕಾನೂನುಬಾಹಿರ ಸಂವಹನ ಮತ್ತು ಚಟುವಟಿಕೆಗಳು, ಕಂಡುಬಂದರೆ, ಇಂಟರ್ನೆಟ್ ಸೇವೆ ಒದಗಿಸುವ ಮತ್ತು ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳಿಗೆ ದೂರು ನೀಡಿ.
  •  ಬಳಕೆದಾರರು ತಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ಗಳನ್ನು ರಕ್ಷಿಸಲು ತಾವೇ ಜವಾಬ್ದಾರಿ ವಹಿಸಬೇಕಾಗುತ್ತದೆ. ಅವುಗಳನ್ನು ಕಾಗದದ ಮೇಲೆ ಅಥವಾ ಎಲ್ಲಿಯೂ ನೆನಪಿಗಾಗಿ ಎಂದೂ ಬರೆಯಬಾರದು.
  •  ಇತರದ ಪಾಸ್ವರ್ಡ್ ಮಾಹಿತಿ, ಫೈಲ್ಗಳು, ಇತ್ಯಾದಿಗಳನ್ನು ಒಳಗೊಂಡಿರಬಹುದಾದ ಮಾಹಿತಿಯನ್ನು ಹಿಂಪಡೆಯಲು ಅಥವಾ ಮಾರ್ಪಡಿಸಲು ಕಂಪ್ಯೂಟರ್ಗಳನ್ನು ಬಳಸಬಾರದು.
Page Rating (Votes : 0)
Your rating: