ಸೈಬರ್ ಅಪರಾಧವು ಅಪಾಯಕಾರಿ ಮಟ್ಟಕ್ಕೆ ಏರಿದ್ದು, ಮಹಿಳೆಯರು ಈ ಅಪರಾಧಕ್ಕೆ ದೊಡ್ಡ ಗುರಿಯಾಗಿದ್ದಾರೆ. ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಗಳು ಸಂಚುಕಾರರು ಅನಾಮಧೇಯವಾಗಿ ಮತ್ತು ಸುಲಭವಾಗಿ ಮಹಿಳೆಯರು ಮತ್ತು ಹುಡುಗಿಯರನ್ನು ಬಳಸಿಕೊಳ್ಳಲು ಅನುವುಮಾಡಿಕೊಡುತ್ತದೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ಸ್ಮಾರ್ಟ್ ಫೋನ್ಗಳನ್ನು ಬಳಸುವ ಮಹಿಳೆಯರು, ಪುರುಷರಿಗಿಂತ ಹೆಚ್ಚಾಗಿ ಮೊಬೈಲಿನ ವ್ಯಸನಿಗಳಾಗುತ್ತಾರೆ ಎಂದು ಒಂದು ಅಧ್ಯಯನ ಹೇಳುತ್ತದೆ. ಮಹಿಳೆಯರು ಹುಡುಕುವುದನ್ನೂ ಸೇರಿದಂತೆ ಕೇವಲ ಕರೆಗಳು, ಗೇಮ್ಸ್ ಆಡುವುದಕ್ಕಿಂತ ಹೆಚ್ಚಾಗಿ, ಸಾಮಾಜಿಕ ನೆಟ್ವರ್ಕಿಂಗ್ ವೆಬ್ಸೈಟ್ ಮತ್ತು ಆನ್ಲೈನ್ ಶಾಪಿಂಗ್ಗಾಗಿ ಮುಖ್ಯವಾಗಿ ಸ್ಮಾರ್ಟ್ ಫೋನ್ಗಳನ್ನು ಬಳಸುತ್ತಾರೆ, ಈ ಸಾಧನಗಳು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿವೆಯಾದರೂ ಸೂಕ್ಷ್ಮ ಮಾಹಿತಿಯನ್ನು ಹೊರಗೆಡುವ ಅಭದ್ರತೆಯೂ ಕೂಡ ಅದರ ಜೊತೆಗಿದೆ., ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹಲವಾರು ವಿಧಗಳಲ್ಲಿ ದುಷ್ಪರಿಣಾಮ ಬೀರಬಹುದಾದ ವಿಧವಿಧವಾದ ಬೆದರಿಕೆಗಳಿವೆ. ಪ್ರಸಕ್ತ ಸನ್ನಿವೇಶದಲ್ಲಿ ಸ್ಮಾರ್ಟ್ ಫೋನ್ ಮೂಲಕ ನಡೆಸುವ ಸೈಬರ್ ಬೆದರಿಕೆಗಳು ಮತ್ತು ಅದರೊಂದಿಗೆ ಬರುವ ಹಲವಾರು ಅಪಾಯಗಳ ಬಗೆಗಿನ ಮಾಹಿತಿಯು ಮಹಿಳೆಯರಿಗೆ ತಿಳಿದಿರುವುದು ಅವಶ್ಯಕವಾಗಿದೆ.

ಮೊಬೈಲ್ ಫೋನ್ ಭದ್ರತಾ ಬೆದರಿಕೆಗಳ ವರ್ಗಗಳು:

  •  ಮೊಬೈಲ್ ಸಾಧನ ಮತ್ತು ಮಾಹಿತಿ ಭದ್ರತಾ ಬೆದರಿಕೆಗಳು

ಮೊಬೈಲ್ ಫೋನ್ ಮತ್ತು ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಫೋನ್ಗಳಿಗೆ ಅನಧಿಕೃತ ಅಥವಾ ಉದ್ದೇಶಪೂರ್ವಕ ಭೌತಿಕ ಪ್ರವೇಶಕ್ಕೆ ಸಂಬಂಧಿಸಿದ ಬೆದರಿಕೆಗಳು.

  • ಕಳೆದುಹೋದ ಅಥವಾ ಕಳ್ಳತನವಾದ ಸಾಧನಗಳು

ಇಂದು ಸ್ಮಾರ್ಟ್ ಫೋನ್ಗಳು ಒಬ್ಬ ವ್ಯಕ್ತಿಯ ಜೀವನದ ಅನಿವಾರ್ಯ ಭಾಗವಾಗಿ ಹೋಗಿದೆ. ನಮ್ಮ ಫೋನ್ ಅನ್ನು ನಾವು ಕಳೆದುಕೊಂಡರೆ / ಬೇರೆಲ್ಲೋ ಇಟ್ಟರೆ, ಇದು ನಮ್ಮ ಸೂಕ್ಷ್ಮ ಮಾಹಿತಿಯು ಸೈಬರ್ ಅಪರಾಧಿಗೆ ತಲುಪಬಹುದಾದ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತದೆ. ಕೇವಲ ಫೋನ್ನಲ್ಲಿ ಸ್ಥಾಪಿಸಲಾದ ಅಪ್ಲಿಕೇಶನ್ಗಳನ್ನು ನೋಡುವ ಮೂಲಕ, ಸ್ಮಾರ್ಟ್ ಫೋನ್ ಬಳಕೆದಾರರು ಮಗುವನ್ನು ನಿರೀಕ್ಷಿಸುತ್ತಿದ್ದಾರೆಯೇ ಎಂಬುದರಿಂದ ಹಿಡಿದುಕೊಂಡು, ಬಳಕೆದಾರರ ವಯಸ್ಸು, ಲಿಂಗ, ಸ್ಥಳ, ತಾಲೀಮು ಚಟುವಟಿಕೆಗಳಲ್ಲಿ ಆಸಕ್ತಿ, ಬಳಕೆದಾರರ ಬಳಲುತ್ತಿರುವ ಸಂಭವನೀಯ ವೈದ್ಯಕೀಯ ಪರಿಸ್ಥಿತಿಗಳ ಬಗ್ಗೆ ಕೂಡಾ ಯಾರಾದರೂ ಊಹೆಮಾಡಬಹುದಾಗಿದೆ.

ನಿಮ್ಮ ಫೋನ್ ಅನ್ಲಾಕ್ ಮಾಡಲು ಯಾವಾಗಲೂ ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿ.

ನಿಮ್ಮ SIM ಕಾರ್ಡ್ಗಾಗಿ ಸಿಮ್ ಲಾಕ್ ಅನ್ನು ಸಕ್ರಿಯಗೊಳಿಸಿ, ಏಕೆಂದರೆ ಒಂದು ಪಕ್ಷ ನಿಮ್ಮ ಫೋನ್ ಅನ್ನು ಕಳೆದುಕೊಂಡರೆ, ಫೋನ್ ಅನ್ನು ನೀವು ಲಾಕ್ ಮಾಡಿದ್ದರೂ ನಿಮ್ಮ SIM ಕಾರ್ಡನ್ನು ಯಾರುಬೇಕಾದರೂ ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ.

  • ಸೂಕ್ಷ್ಮ ಮಾಹಿತಿಯು ಬೆಳಕಿಗೆಬರುವುದು.

ಮೊಬೈಲ್ ಸಾಧನಗಳಲ್ಲಿ ಮಾಹಿತಿ ರಕ್ಷಣೆ ಅಥವಾ ಮಾಹಿತಿಯ ಸೋರಿಕೆ ತಡೆಗಟ್ಟುವಿಕೆಯ ಸಾಮರ್ಥ್ಯಗಳ ಕೊರತೆಇದೆ. ಇದು ಯಾವುದೇ ವ್ಯಕ್ತಿಯ ಗುರುತಿಗೆ ಗಂಭೀರವಾದ ಬೆದರಿಕೆಯನ್ನು ಒಡ್ಡಬಹುದಾಗಿದೆ. ನಿಮ್ಮ ವೈಯಕ್ತಿಕ ಬ್ಯಾಂಕಿಂಗ್ ಮಾಹಿತಿ ಸಹ ಅಪಾಯಕ್ಕೆ ಒಳಗಾಗಬಹುದಾಗಿದೆ.
ಮೊಬೈಲ್ ಫೋನ್ನಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಕಾರ್ಡಿನ ಪಾಸ್ ವರ್ಡ್ ಗಳು ಮುಂತಾದ ಪ್ರಮುಖ ಮಾಹಿತಿಯನ್ನು ಶೇಖರಿಸಿಡದಂತೆ ಸಲಹೆ ನೀಡಲಾಗುತ್ತದೆ.

ಅಪ್ಲಿಕೇಶನ್ಗಳನ್ನು ಬಳಸಿದ ನಂತರ ನೀವು ಅದರಿಂದ ಲಾಗ್ ಔಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

  • ಮೊಬೈಲ್ ಸಂಪರ್ಕದ ಭದ್ರತಾ ಬೆದರಿಕೆಗಳು

ಬ್ಲೂಟೂತ್, ವೈ-ಫೈ, ಯುಎಸ್ಬಿ ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ತಿಳಿಯದಿರದ ಸಿಸ್ಟಮ್ ಗಳು, ಫೋನ್ಗಳು ಮತ್ತು ನೆಟ್ವರ್ಕ್ಗಳಿಗೆ ಮೊಬೈಲ್ ಫೋನ್ ನನ್ನು ಸಂಪರ್ಕಿಸುವುದಕ್ಕೆ ಸಂಬಂಧಿಸಿದ ಬೆದರಿಕೆಗಳು.

ತೆರೆದ ವೈ-ಫೈ

ತೆರೆದ ವೈ-ಫೈ ನೆಟ್ವರ್ಕ್ಗಳಲ್ಲಿ ನಮ್ಮ ಮೊಬೈಲ್ ಫೋನ್ ಗಳು ಸಂಪರ್ಕಗೊಂಡಾಗ ಹೆಚ್ಚಾಗಿ ಬೆದರಿಕೆಗಳನ್ನು ಉಂಟುಮಾಡುತ್ತವೆ. ತೆರೆದ ವೈ-ಫೈ ನೆಟ್ವರ್ಕ್ಗಳನ್ನು ಬಳಸುವಾಗ ಯಾವುದೇ ಬ್ಯಾಂಕಿನ ವಹಿವಾಟುಗಳನ್ನು ಮಾಡುವುದು ಮತ್ತು ಯಾವುದೇ ಸೂಕ್ಷ್ಮ ಮಾಹಿತಿಯನ್ನು ಬಳಸದಿರುವಂತೆ ಸಲಹೆ ನೀಡಲಾಗುತ್ತದೆ.

ನಿಮಗೆ ತಿಳಿದಿರುವ ಬಳಕೆದಾರರು ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ಗಳನ್ನು ಪ್ರವೇಶಿಸುವ ಅಗತ್ಯದ ಹೊರತಾಗಿ, ಬ್ಲೂಟೂತ್ ಸಂಪರ್ಕವನ್ನು ಅಗೋಚರ ಮೋಡ್ ಅಲ್ಲಿ ಇರಿಸಿ. ನಿಮಗೆ ತಿಳಿಯದಿರುವ ಬಳಕೆದಾರರು ಬ್ಲೂಟೂತ್ ಮೂಲಕ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದರೆ, ಅದು ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುವಂತೆ ಬ್ಲೂಟೂತಿನ ವ್ಯಾಪ್ತಿಯ ಪ್ರದೇಶದಿಂದ ದೂರವಿರಿ.

ತೆರೆದ ವೈ-ಫೈ ನಲ್ಲಿ ಲಾಗ್ ಇನ್ ಮಾಡುವಾಗ ಹಣಕಾಸಿನ, ವೈದ್ಯಕೀಯ ಅಥವಾ ವ್ಯವಹಾರ ಕಾರ್ಯಗಳನ್ನು ನಿರ್ವಹಿಸಬೇಡಿ. ಹಾಗೊಮ್ಮೆ ಬಳಸಲೇ ಬೇಕಾದ ಸಂದರ್ಭದಲ್ಲಿ VPN ಅನ್ನು ಪಡೆದುಕೊಳ್ಳಿ ಅಥವಾ ಸುರಕ್ಷಿತ ನೆಟ್ವರ್ಕ್ ಅನ್ನು ಬಳಸಿ.

ತೆರೆದ ವೈ-ಫೈ ನಲ್ಲಿ ಲಾಗ್ ಇನ್ ಮಾಡುವಾಗ ಯಾವುದೇ ಪಾಸ್ವರ್ಡ್ಗಳು ಮತ್ತು ಸೂಕ್ಷ್ಮ ಮಾಹಿತಿಯನ್ನು ಬಳಸಬೇಡಿ

ಫಿಶಿಂಗ್ ಇಮೇಲ್ ಗಳು

ವಿಶ್ವಾಸಾರ್ಹ ಬ್ಯಾಂಕುಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಕಳುಹಿಸಿದಂತೆ ಗೋಚರವಾಗುವ ಇಮೇಲ್ಗಳಿಗೆ, ಇಮೇಲ್ ಬಳಕೆದಾರರು ಬಲಿಯಾಗುತ್ತಲೇ ಇದ್ದಾರೆ.

ಮ್ಯಾನಿಪ್ಯುಲೇಟಿವ್(ತಿರುಚಿಮುರುಚಿದ) ಭಾಷೆಯು ಗ್ರಾಹಕರ ತುರ್ತು ಪ್ರಜ್ಞೆಯನ್ನು ಪ್ರೇರೇಪಿಸಿ ಹಠಾತ್ ನಿರ್ಣಯ ತೆಗೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಬಳಕೆದಾರರು ಎಂಬೆಡ್ (ಮರೆಮಾಚಿದ) ಮಾಡಿದ ಲಿಂಕ್ಗಳನ್ನು ಕ್ಲಿಕ್ ಮಾಡಿ, ಮತ್ತು ವಿಶ್ವಾಸಾರ್ಹವಲ್ಲದ ವೆಬ್ ಸೈಟ್ಗಳಲ್ಲಿ ಮಾಹಿತಿಯನ್ನು ಶೇರ್ ಮಾಡುತ್ತಾರೆ, ಅವಿತುಕೊಂಡಿರುವ ಡೇಟಾ-ಮೈನಿಂಗ್ ಮಾಲ್ವೇರ್ಗಳನ್ನು ಒಳಗೊಂಡಿರುವ ಅಟ್ಯಾಚ್ಮೆಂಟ್ (ಲಗತ್ತು)ಗಳನ್ನು ಡೌನ್ಲೋಡ್ ಮಾಡಿ ಅಥವಾ ಸೋಂಕಿತ ಇಮೇಲ್ಗಳನ್ನು ತಮ್ಮ ಸಂಪರ್ಕಗಳೊಂದಿಗೆ ಹಂಚಿಕೊಳ್ಳುತ್ತಾರೆ.

ಇಮೇಲ್ ವಿಳಾಸಗಳು ಯಾವಾಗಲೂ ಕಳುಹಿಸುವವರ ಹೆಸರುಗಳಿಗೆ ಹೊಂದಾಣಿಕೆಯಾಗುತ್ತದೆಯೇ ಎಂದು ಗಮನಿಸಿ. ಬುಕ್ ಮಾರ್ಕ್ ಮೂಲಕ ಅಥವಾ ಟೈಪ್ ಮಾಡಿದ URL ವಿಳಾಸ ಬಾರ್ ಮೂಲಕ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಮತ್ತು ಎಲ್ಲಾ ಡೌನ್ಲೋಡ್ಗಳನ್ನು ವಿಶ್ವಾಸಾರ್ಹ ಆಂಟಿ-ವೈರಸ್ಸಿನ ಪ್ರೋಗ್ರಾಂನಿಂದ ಸ್ಕ್ಯಾನ್ ಮಾಡಿ

ಸ್ಮಿಶಿಂಗ್ ಮೆಸೇಜಸ್ ಗಳು

ಮೇಲಿನ ಈ-ಮೇಲಿನ ಫಿಶಿಂಗ್ ನಿಯಮಗಳು ಮೆಸೇಜಸ್ ಗಳಿಗೂ ಅನ್ವಯಿಸುತ್ತವೆ. ಮೆಸೇಜಿನ ಮೂಲ ಅಥವಾ ಕಳುಹಿಸುವವರ ಉದ್ದೇಶಗಳ ಬಗ್ಗೆ ನಿಮಗೆ ಅನುಮಾನವಿದ್ದಲ್ಲಿ, ಅವರೇ ನಿಮಗೆ ಸಂದೇಶವನ್ನು ಕಳುಹಿಸಿದ್ದಾರೆಂದು ದೃಢೀಕರಿಸಲು ಫೋನ್ ಕರೆ ಮೂಲಕ ನೀವು ಊಹಿಸಿದ ರವಾನೆದಾರರನ್ನು ಸಂಪರ್ಕಿಸಿ. ನಿಮ್ಮ ಬ್ಯಾಂಕ್ ಅನ್ನು ಸಂರ್ಪಕಿಸುವುದನ್ನು ಪರಿಗಣಿಸಿ - ಆದರೆ ಇಲ್ಲಿವರೆಗೂ ಸಂಪರ್ಕಿಸುತ್ತಿರುವ ಸಾಮಾನ್ಯ ಮಾರ್ಗಗಳ ಮೂಲಕ ಅವರನ್ನು ಸಂಪರ್ಕಿಸಿ. ಮೆಸೇಜಸ್ ಮೂಲಕ ಕಳುಹಿಸಿದ ಯಾವುದೇ URL ಗಳನ್ನು ಕ್ಲಿಕ್ ಮಾಡಬೇಡಿ.

ದುರ್ಬಲವಾದ  ದೃಢೀಕರಣ

ದುರ್ಬಲ ಪ್ರಮಾಣೀಕರಣ ಸಾಧನಗಳನ್ನು ಹೊಂದಿರುವ ಮೊಬೈಲ್ ಪಾವತಿ ವ್ಯವಸ್ಥೆಯನ್ನು ಅಪರಾಧಿಗಳು ಇಷ್ಟಪಡುತ್ತಾರೆ. ಇ-ವಾಣಿಜ್ಯ ಬ್ರೌಸರ್ ಅಪ್ಲಿಕೇಶನ್ಗಳು ಮತ್ತು ವರ್ಚುವಲ್ ವ್ಯಾಲೆಟ್ಗಳು ಸೇರಿದಂತೆ ನೀವು ಬಳಸುವ ಯಾವುದೇ ಪಾವತಿ ವ್ಯವಸ್ಥೆಗಳು ಮಲ್ಟಿ ಫ್ಯಾಕ್ಟರ್ ದೃಢೀಕರಣ ಮತ್ತು ಮಲ್ಟಿ-ಲೆವೆಲ್ ಡೇಟಾ ಗೂಢಲಿಪೀಕರಣ (ಎನ್ಕ್ರಿಪ್ಷನ್) ವನ್ನು ಹೊಂದಿರಬೇಕು. ಉದಾಹರಣೆಗೆ, ಒಂದು ಭದ್ರತಾ ವ್ಯವಸ್ಥೆಗೆ ಬಳಕೆದಾರ ID, ಪಾಸ್ವರ್ಡ್ ಮತ್ತು ಸುರಕ್ಷತಾ ಚಿತ್ರ ದೃಢೀಕರಣ ಅಥವಾ ಒಂದು ಬಾರಿ-ಬಳಕೆಯ PIN ನಿನ ಅಗತ್ಯವಿರ ಬಹುದಾಗಿರುತ್ತದೆ. ಅತ್ಯುತ್ತಮ ಪಾವತಿ ವ್ಯವಸ್ಥೆಗಳು ನಿಮ್ಮ ಕ್ರೆಡಿಟ್ ಕಾರ್ಡ್ ನ ಮಾಹಿತಿಯನ್ನು ಒಂದು ಟೋಕನ್ ಆಗಿ ಪರಿವರ್ತಿಸುತ್ತವೆ, ಇದರಿಂದಾಗಿ ಅದರ ಮಾಹಿತಿಯನ್ನು ಎಲ್ಲಿಯೂ ಓದಲಾಗುವುದಿಲ್ಲ.

  • ಮೊಬೈಲ್ ಅಪ್ಲಿಕೇಶನ್ ಮತ್ತು ಆಪರೇಟಿಂಗ್ ಸಿಸ್ಟಮ್ ಗಳಲ್ಲಿನ ಭದ್ರತಾ ಬೆದರಿಕೆಗಳು

ಮೊಬೈಲ್ ಅಪ್ಲಿಕೇಷನ್ಸ್ ಮತ್ತು ಆಪರೇಟಿಂಗ್ ಸಿಸ್ಟಮ್ ಗಳಲ್ಲಿನ ಅಭದ್ರತೆಯಿಂದ ಉಂಟಾಗುವ ಬೆದರಿಕೆಗಳು.

ನಾವು ಉಚಿತವಾಗಿ ದೊರಕುವ ಅಪ್ಲಿಕೇಶನ್ಗಳನ್ನು ತಿಳಿಯದೆ ಡೌನ್ಲೋಡ್ ಮಾಡುವಾಗ, ನಾವು ಆ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವ ಮೂಲಕ ನಾವು ರಾಜಿಮಾಡಿಕೊಳ್ಳುತ್ತಿರುವ ಗೌಪ್ಯತೆ ಸೆಟ್ಟಿಂಗ್ಗಳು ಯಾವುವು ಎಂಬುದನ್ನು ನಾವು ಎಂದಿಗೂ ಪರಿಶೀಲಿಸುವುದಿಲ್ಲ. ನಿಮ್ಮ ಮೊಬೈಲ್ನಲ್ಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ನಿಮ್ಮ ಮಾಹಿತಿಯನ್ನು ಕದಿಯುವ, ಮಾಲ್ವೇರ್ ಅಪ್ಲಿಕೇಶನ್ಗಳೆಂದು ಕರೆಯಲ್ಪಡುವ ಹಲವಾರು ಅಪ್ಲಿಕೇಶನ್ಗಳು ಇವೆ.

ಅನಧಿಕೃತ ಮೂಲದಿಂದ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ ಗೆ ವಿಷಯವನ್ನು ಡೌನ್ಲೋಡ್ ಮಾಡುವುದನ್ನು ತಪ್ಪಿಸಿ. ಅಪ್ಲಿಕೇಶನ್ ಗಳಿಗೆ ಅನುಮತಿಸುವ ಮೊದಲು ಯೋಚಿಸಿ. ಫ್ಲಾಶ್ ಲೈಟ್ ಅಪ್ಲಿಕೇಶನ್ ಗೆ ನಿಮ್ಮ ಸಾಧನದ ಸ್ಥಳವನ್ನು ನಿಜವಾಗಿಯೂ ತಿಳಿಯುವ ಅಗತ್ಯವಿದೆಯೇ ?

ಅಪ್ಲಿಕೇಶನ್ಗಳನ್ನು ಬಳಸದಿರುವಾಗ ಅವುಗಳಿಗೆ ನೀಡಿರುವ ನಿರ್ಣಾಯಕ ಅನುಮತಿಗಳನ್ನು ರದ್ದುಗೊಳಿಸಿ.

  • ಮೊಬೈಲ್ ಫೋನಿನ ಮೇಲಿನ ದಾಳಿಯ ವಿಶಿಷ್ಟ ಪರಿಣಾಮಗಳು:

  1. ಮೊಬೈಲ್ ಫೋನ್ ಮೂಲಕ ಹೊರಹೋಗುತ್ತಿರುವ, ಬಳಕೆದಾರರ ವೈಯಕ್ತಿಕ ಮಾಹಿತಿ / ಶೇಖರಣೆಯಾದ ಮಾಹಿತಿಯ ನಷ್ಟ ಅಥವಾ ಮಾಹಿತಿಯು ಹೊರಬರುವುದು.
  2. ದುರುದ್ದೇಶಪೂರಿತ ಸಾಫ್ಟ್ ವೇರ್ ನಿಮಗೆ ತಿಳಿಯದೆಯೇ ಇರದಂತೆ ಪ್ರೀಮಿಯಂ ಮತ್ತು ಹೆಚ್ಚು ಬೆಲೆಯ SMS ಮತ್ತು ಕಾಲ್ ಸೇವೆಗಳನ್ನು ಬಳಸಿಕೊಳ್ಳುತ್ತದೆ. ಇದರಿಂದ ನಿಮಗೆ ಹಣದ ನಷ್ಟಉಂಟಾಗುತ್ತದೆ.
  3.  ಬಳಕೆದಾರರಿಗೆ ಅರಿವಿಲ್ಲದಂತೆಯೇ, ಮೊಬೈಲ್ ಫೋನ್ ಸ್ಥಳವನ್ನು ಖಾಸಗಿ ಎಸ್ಎಂಎಸ್ ಮತ್ತು ಕರೆಗಳೊಂದಿಗೆ ಪತ್ತೆಹಚ್ಚುವ ಗೌಪ್ಯತೆ ದಾಳಿಯನ್ನು ಒಳಗೊಂಡಿರುತ್ತದೆ.
  4. ಮೊಬೈಲ್ ಫೋನಿನ ನಿಯಂತ್ರಣವನ್ನು ಕಳೆದುಕೊಳ್ಳುವುದು ಮತ್ತು ನಿಮಗೆ ಅರಿವಿಲ್ಲದಂತೆಯೇ ಉದ್ದೇಶಪೂರ್ವಕವಾದ ದಾಳಿಗೆ ಗುರಿಯಾಗಿ ನಿಮ್ಮ ಫೋನ್ ಇನ್ನೊಬ್ಬರ ಕೈಗೊಂಬೆಯಾಗುತ್ತದೆ.
Page Rating (Votes : 3)
Your rating: