ಆನ್ಲೈನ್ ​​ಹಗರಣವು ಮೋಸದಿಂದ ಹಣವನ್ನು ಪಡೆಯಲಿಕ್ಕಾಗಿ ನಿಮ್ಮನ್ನು   ಬಲೆಗೆ ಬೀಳಿಸುವ  ಒಂದು ಪ್ರಯತ್ನವಾಗಿದೆ. ಅನೇಕ ರೀತಿಯ ಆನ್ಲೈನ್ ​​ಸ್ಕ್ಯಾಮ್ಗಳಿವೆ; ನಕಲಿ ಹೆಸರುಗಳು, ನಕಲಿ ಫೋಟೋಗಳು, ನಕಲಿ ಇ-ಮೇಲ್ಗಳು, ಖೋಟಾ ದಾಖಲೆಗಳು, ನಕಲಿ ಕೆಲಸದ ಕೊಡುಗೆಗಳು ಮತ್ತು ಈ ರೀತಿಯ ಹತ್ತು ಹಲವುಗಳಿಂದ ಹಣವನ್ನು ಪಡೆಯುವುದು ಇದರಲ್ಲಿ ಸೇರಿದೆ.

ಸಾಮಾನ್ಯವಾಗಿ, ಆನ್ಲೈನ್ ​​ಬ್ಯಾಂಕಿಂಗ್ ವಿವರಗಳು, ಕ್ರೆಡಿಟ್ ಕಾರ್ಡ್ ವಿವರಗಳು ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆಯಲು  ನಕಲಿ ಇ-ಮೇಲ್ಗಳನ್ನು ಕಳುಹಿಸುವ ಮೂಲಕ ಇದನ್ನು  ನಡೆಸಲಾಗುತ್ತದೆ. ನೀವು ಆನ್ಲೈನ್ ​​ಹರಾಜಿನಲ್ಲಿ ಭಾಗವಹಿಸಿದಾಗಲೆಲ್ಲಾ ಲಾಟರಿ ಕಂಪನಿಗಳು ನಕಲಿ ನೋಟಿಸನ್ನು ಕಳಿಸುತ್ತವೆ ಮತ್ತು ನೀವು ನಕಲಿ ಉಡುಗೊರೆಗಳಿಗಾಗಿ ಈ ಮೇಲ್ ಅನ್ನು ಸ್ವೀಕರಿಸುತ್ತೀರಿ.  ಸೈಬರ್ ಅಪರಾಧಿಗಳು ಮುಗ್ಧ ಮತ್ತು ಅರಿವಿಲ್ಲದ  ಜನರಿಗೆ ಮೋಸಮಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಾರೆ

ಸ್ಕ್ಯಾಮರ್ಸ್ ಗಳು ಹೇಗೆ ಮಹಿಳೆಯರನ್ನು ಗುರಿ ಮಾಡುತ್ತವೆ

  • ಡೇಟಿಂಗ್ ಮತ್ತು ಪ್ರಣಯ ವಂಚನೆಗಳು

ಇದು ಆನ್ಲೈನ್ ​​ಡೇಟಿಂಗ್ ವೆಬ್ಸೈಟ್ಗಳ ಮೂಲಕ ನಡೆಯುತ್ತದೆ, ಆದರೆ ಸಂಪರ್ಕವನ್ನು ಮಾಡಲು ಸ್ಕ್ಯಾಮಾರ್ ಗಳು  ಸಾಮಾಜಿಕ ಮಾಧ್ಯಮ ಅಥವಾ ಇಮೇಲ್ಗಳನ್ನೂ ಸಹ ಬಳಸಬಹುದು. ಅವರ  ವಿಕ್ಟಿಮ್ (ಬಲಿಪಶು) ಗಳಿಗೆ ಮೊದಲ ಪರಿಚಯವಾಗಿ ಕರೆ ಮಾಡುವುದೂ ಸಹ ಎಲ್ಲರಿಗೂ  ತಿಳಿದಿರುವ ವಿಷಯವಾಗಿದೆ. ಈ ವಂಚನೆಗಳನ್ನು 'ಕ್ಯಾಟ್ ಫಿಶಿಂಗ್' ಎಂದು ಕೂಡ ಕರೆಯಲಾಗುತ್ತದೆ. ಸ್ಕ್ಯಾಮಾರ್ ಗಳು ವಿಶಿಷ್ಟವಾಗಿ ನಿಮ್ಮನ್ನು  ಆಮಿಷಕ್ಕೆ ಒಳಮಾಡಲು ನಕಲಿ ಆನ್ಲೈನ್ ​​ಪ್ರೊಫೈಲ್ಗಳನ್ನು ವಿನ್ಯಾಸಗೊಳಿಸುತ್ತಾರೆ.  ಅವರು ಕಾಲ್ಪನಿಕ ಹೆಸರನ್ನು ಬಳಸಬಹುದು ಅಥವಾ ಮಿಲಿಟರಿ ಸಿಬ್ಬಂದಿ, ನೆರವು ಕೆಲಸಗಾರರು ಅಥವಾ ವಿದೇಶದಲ್ಲಿ ಕೆಲಸಮಾಡುವ  ವೃತ್ತಿಪರರಂತಹ ವಿಶ್ವಾಸಾರ್ಹ ಜನರ ಗುರುತನ್ನು ತಪ್ಪಾಗಿ ಬಳಸಬಹುದು. ಕಡಿಮೆ ಸಮಯದಲ್ಲಿ ನಿಮ್ಮ ಬಳಿ ಬಲವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ನಿಮ್ಮ ಆಸಕ್ತಿ ಮತ್ತು ವಿಶ್ವಾಸವನ್ನು ಪಡೆಯಲು ಅವರು ಬಹಳ ದೂರ ಹೋಗುತ್ತಾರೆ, ಉದಾಹರಣೆಗೆ ಪ್ರೀತಿಯ ಮಾತುಗಳನ್ನು ಸುರಿಸುವುದು, ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ನಿಮಗೆ ಉಡುಗೊರೆಗಳನ್ನು ಸಹ ಕಳುಹಿಸುವುದು.

ಒಮ್ಮೆ ಅವರು ನಿಮ್ಮ ನಂಬಿಕೆಯನ್ನು ಪಡೆದು ಮತ್ತು ನಿಮ್ಮ ನಿರೋಧಕತೆಗಳು ಕಡಿಮೆಯಾದವೆಂದರೆ,   ಹಣ, ಉಡುಗೊರೆಗಳು ಅಥವಾ ನಿಮ್ಮ ಬ್ಯಾಂಕಿಂಗ್ / ಕ್ರೆಡಿಟ್ ಕಾರ್ಡ್ ವಿವರಗಳಿಗಾಗಿ ಅವರು ನಿಮ್ಮನ್ನು (ಸೂಕ್ಷ್ಮವಾಗಿ ಅಥವಾ ನೇರವಾಗಿ) ಕೇಳುತ್ತಾರೆ. ಅವರು  ಬಹುಶಃ ಹೆಚ್ಚು ನಿಕಟವಾಗಿರುವ  ನಿಮ್ಮ ಫೋಟೋ  ಅಥವಾ ವೀಡಿಯೊಗಳನ್ನು ಕಳುಹಿಸಲು ಕೇಳಬಹುದು.

  • ಲಾಟರಿ ಹಗರಣ

ಕೆಲವೊಮ್ಮೆ ನೀವು "ಲಾಟರಿ ಗೆದ್ದಿದ್ದೀರಿ" ಎಂಬಂತ  ಇಮೇಲ್ / ಎಸ್ ಎಂ ಎಸ್  ಅನ್ನು  ಸ್ವೀಕರಿಸುತ್ತೀರಿ ಹಾಗೂ ಈ  ರೀತಿಯ ಗೆಲುವಿನ ವಿಷಯದ ಮೇಲ್ಗಳು / ಎಸ್ ಎಂ ಎಸ್  ಅನ್ನು ಪಡೆಯುವುದು ದೊಡ್ಡ ವಿಷಯ ಮತ್ತು ಇದು ನಿಜವಾಗಿಯೂ ಸಂತೋಷಕರವಾಗಿರುತ್ತದೆ . ಈ ರೀತಿಯ ಒಂದು  ಮೇಲ್ / ಎಸ್ಎಂಎಸ್ಗೆ ಪ್ರತಿಕ್ರಿಯೆ ನೀಡುವ ಮೂಲಕ ದೊಡ್ಡ ಪ್ರಮಾಣದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಇ-ಮೇಲ್ಗಳು / ಎಸ್ಎಂಎಸ್ಗಳು ನಿಜವಲ್ಲದ್ದರಿಂದ, ಹಣವನ್ನು ಗಳಿಸುವ ಸಲುವಾಗಿ  ಸ್ಕ್ಯಾಮರ್ಗಳು ನಿಮ್ಮನ್ನು ಮೂರ್ಖರನ್ನಾಗಿಸಿ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ.

  • ನಕಲಿ ರಸಪ್ರಶ್ನೆಗಳು ನಿಮ್ಮಿಂದ ನಿಮ್ಮ ಮಾಹಿತಿಯನ್ನು ಹೊರತೆಗೆಯುತ್ತವೆ

ಚಲನಚಿತ್ರಗಳು ಅಥವಾ ವೀಡಿಯೊ ಗೇಮ್ಗಳಿಂದ ಸ್ಫೂರ್ತಿ ಪಡೆದ ರಸಪ್ರಶ್ನೆಗಳನ್ನು ಒಳಗೊಂಡ ಪೋಸ್ಟ್ಗಳನ್ನು ನೀವು  ನೋಡಿರುತ್ತೀರಿ. ಮೂಲಭೂತವಾಗಿ, ನೀವು ಕೆಲವು ಪ್ರಶ್ನೆಗಳನ್ನು   ಉತ್ತರಿಸುತ್ತೀರಿ ಮತ್ತು ನಂತರ ಆ  ರಸಪ್ರಶ್ನೆಯು  ನೀವು ಯಾವ ಚಲನಚಿತ್ರದ ಪಾತ್ರ ಅಥವಾ ನಿಮ್ಮ  ವ್ಯಕ್ತಿತ್ವದ  ಮೌಲ್ಯಮಾಪನವನ್ನು ಹೇಳುತ್ತದೆ. ಅನೇಕ ಬಾರಿ, ಈ ರಸಪ್ರಶ್ನೆಗಳು ನಿಮ್ಮ ಉತ್ತರಗಳನ್ನು ಸಂಗ್ರಹಿಸಿ ನಂತರ ಅವುಗಳನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವ ಗೌಪ್ಯತೆ ಹಗರಣಗಳಿಗೆ ಮಾರ್ಗಗಳಾಗಿರುತ್ತವೆ. ಈ ರಸಪ್ರಶ್ನೆಗಳು   "ಫೇಸ್ ಬುಕ್ಕಿನೊಂದಿಗೆ ಲಾಗಿನ್" ಗುಂಡಿಯೊಂದಿಗೆ ಬರುತ್ತವೆ. ಇದು ಇಮೇಲ್ಗಳು, ಸ್ಥಳ, ಭಾಷೆ, ಕೆಲಸ ಮತ್ತು ಮುಂತಾದವುಗಳಂತಹ ನಿಮ್ಮ ಎಲ್ಲ ಪ್ರಮುಖ ಮಾಹಿತಿಯನ್ನು ಆ ವೆಬ್ಸೈಟ್ / ಅಪ್ಲಿಕೇಶನ್ಗೆ ನೀಡುತ್ತದೆ.

  • ಇಮೇಲ್ ಸ್ಕ್ಯಾಮ್ ಈ ರೀತಿಯಲ್ಲಿರುತ್ತದೆ  - ಅಭಿನಂದನೆಗಳು ನೀವು ವೆಬ್ಕ್ಯಾಮ್, ಡಿಜಿಟಲ್ ಕ್ಯಾಮೆರಾ ಅಥವಾ ನಂಬಲಾಗದ ಮೊತ್ತದ ನಗದು ಬಹುಮಾನವನ್ನು ಗೆದ್ದಿದ್ದೀರಿ.

ಕೆಲವೊಮ್ಮೆ, ನೀವು ಡಿಜಿಟಲ್ ಕ್ಯಾಮರಾ ವೆಬ್ ಕ್ಯಾಮೆರ ದಂತಹ ವಿಶೇಷವಾದ ಕೊಡುಗೆಯನ್ನು ಗೆದ್ದಿದ್ದೀರಿ, ನೀವು ಕೆಳಗೆ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಮ್ಮ ವೆಬ್ ಸೈಟ್ಗೆ ಭೇಟಿ ನೀಡಬೇಕು ಮತ್ತು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಾಗಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸಲು ನೀಡಬೇಕಾಗುತ್ತದೆ ಎಂಬ ಸಂದೇಶದ ಈ ಮೇಲ್ ಅನ್ನು ಸ್ವೀಕರಿಸಬಹುದು.  ಆದಾಗ್ಯೂ ಆ ವಸ್ತುವನ್ನು ನೀವು ಪಡೆಯುವುದಿಲ್ಲ ಆದರೆ ಕೆಲವು ದಿನಗಳ ನಂತರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಆ  ಶುಲ್ಕಗಳು ತೋರಿಸಲ್ಪಡುತ್ತವೆ ಮತ್ತು ನೀವು ಹಣವನ್ನು ಕಳೆದುಕೊಳ್ಳುತ್ತೀರಿ.

  • ತೆರಿಗೆ ಹಗರಣ

ವಿಕ್ಟಿಮ್ ಅನ್ನು ಸರ್ಕಾರಿ ಸಂಸ್ಥೆಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು,  ಡ್ರೈವರ್ನ ಲೈಸೆನ್ಸ್ /  ಪಾಸ್ ಪೋರ್ಟ್ ಅಮಾನತು, ಗಡೀಪಾರು ಅಥವಾ ಅರೆಸ್ಟ್ ಅನ್ನು ತಪ್ಪಿಸಲು ನೀವು  ತೆರಿಗೆಯನ್ನು ತಕ್ಷಣವೇ ಪಾವತಿಸಬೇಕೆಂದು ಹೇಳುತ್ತಾರೆ. ಬಲಿಪಶುವಿಗೆ  ಹಣ ವರ್ಗಾವಣೆ ಮಾಡಲು  ಅಥವಾ ತೆರಿಗೆಗಳನ್ನು ಪಾವತಿಸಲು ಪೂರ್ವ ಲೋಡ್ ಮಾಡಲಾದ ಡೆಬಿಟ್ ಕಾರ್ಡ್ ಅನ್ನು ಖರೀದಿಸಲು ಸೂಚನೆ ನೀಡಲಾಗುತ್ತದೆ. ಸರ್ಕಾರದ ಏಜೆನ್ಸಿಗಳು ಎಂದೂ ಮೊದಲು ರಸೀದಿಯನ್ನು ರವಾನೆ ಮಾಡದೆ ನಿಮ್ಮನ್ನು  ತಕ್ಷಣವೇ ಪಾವತಿಸಬೇಕೆಂದು ಬೇಡಿಕೆ ಅಥವಾ ಕರೆಯನ್ನು  ಮಾಡುವುದಿಲ್ಲ.  ಸಾಮಾನ್ಯವಾಗಿ, ವೆಬ್ಸೈಟ್ಗಳು ಅಧಿಕೃತ ವೆಬ್ಸೈಟ್ಗಳಂತೆ ಗೋಚರಿಸುತ್ತದೆ ಮತ್ತು ಕ್ರೆಡಿಟ್ ಕಾರ್ಡ್ನ ವಿವರಗಳನ್ನು, ಎಟಿಎಂನ ಸಿವಿವಿ ಪಿನ್ ಮತ್ತು ತೆರಿಗೆದಾರರ ಇತರ ವೈಯಕ್ತಿಕ ವಿವರಗಳನ್ನು ಎಲೆಕ್ಟ್ರಾನಿಕ್ ಮೂಲಕ ತೆರಿಗೆ ಮರುಪಾವತಿಯ ಹೆಸರಿನಲ್ಲಿ ಕೇಳಲಾಗುತ್ತದೆ.

  • ನಿಮ್ಮ ಖಾತೆಯನ್ನು ಮೇಲ್ವಿಚಾರಣೆ ಮಾಡುವ ನಿಷ್ಕ್ರಿಯ ನಕಲಿ ಸ್ನೇಹಿತರು ಮತ್ತು ಅನುಯಾಯಿಗಳು

ನೀವು ಸಾಮಾಜಿಕ ಮಾಧ್ಯಮದಲ್ಲಿ ನಿಜವಾಗಿ ಭೇಟಿಯಾಗದ   ಮತ್ತು ಅವರು ಯಾರೆಂದು ಗೊತ್ತಿರದ ಸ್ನೇಹಿತರನ್ನು ಹೊಂದಿರಬಹುದು. ಅಪರಾಧಿಗಳು ನಿಮ್ಮ ಈ ನಿರ್ಲ್ಯಕ್ಷವನ್ನು ನಿಮ್ಮೊಂದಿಗೆ ಸ್ನೇಹಪೂರ್ವಕವಾಗಿ ನಡೆದುಕೊಂಡು  ನಂತರ ನೀವು ಏನು ಮಾಡಲಿದ್ದೀರಿ ಮತ್ತು ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ತಿಳಿದುಕೊಳ್ಳಲು ನಿಮ್ಮ ಖಾತೆಯನ್ನು ಮೇಲ್ವಿಚಾರಣೆ ಮಾಡಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ನಿಮ್ಮ ಸ್ಥಳದ  ಹೊರಗಿನ  ನಗರ ಅಥವಾ ಹೊರ ದೇಶದ ರಜೆಯ ಫೋಟೋಗಳಿಗಾಗಿ ಅವರು ಉಸ್ತುವಾರಿಯಲ್ಲಿರುತ್ತಾರೆ, ಅಂದರೆ ಆ ಸಮಯದಲ್ಲಿ  ನಿಮ್ಮ ಮನೆ ಬಹುಶಃ ಖಾಲಿಯಾಗಿರುತ್ತದೆ ಮತ್ತು ಇದು ಅವರು ಮನೆಯನ್ನು   ಹೊಕ್ಕಿ ಲೂಟಿಮಾಡಲು ಸುಲಭ ಮಾಡುತ್ತದೆ.

  • ಹಣದ ಹಗರಣಗಳ ಹರಿವು

ನಿರ್ದಿಷ್ಟವಾಗಿ ಇನ್ಸ್ಟಾ ಗ್ರಾಂ ನಲ್ಲಿ ಕಂಡುಬರುವ  ಈ ರೀತಿಯ ಹಣದ ಹಗರಣಗಳು, ಆರಂಭಿಕ ಹೂಡಿಕೆಯಾಗಿ ಸಣ್ಣ ಪ್ರಮಾಣದ ಮೊತ್ತವನ್ನು ಮಾತ್ರ ಪಾವತಿಸಿದರೆ ಬಳಕೆದಾರನಿಗೆ ದೊಡ್ಡ ಆದಾಯವನ್ನು ನೀಡುವ ಮೂಲಕ ಹಣ ಹಿಂತಿರುಗಿಸುವ  ಹಗರಣಗಳು ಕಾರ್ಯನಿರ್ವಹಿಸುತ್ತವೆ. ಹೂಡಿಕೆಗೆ 10 ಪಟ್ಟು  ರಿಟರ್ನ್ ಪಡೆಯುವ ಸಲುವಾಗಿ ವಿನಿಮಯ ದರಗಳು ಮತ್ತು ಸ್ಟಾಕ್ ಬೆಲೆಗಳನ್ನು ಹೇಗೆ ಕುಶಲತೆಯಿಂದ ನಿಯಂತ್ರಿಸಬೇಕೆಂಬುದರ ಬಗ್ಗೆ ಒಳ ಜ್ಞಾನವನ್ನು ಪಡೆದುಕೊಂಡಿರುವ  ಆರ್ಥಿಕ ಸಲಹೆಗಾರ ಅಥವಾ ಇಂಟರ್ನೆಟ್ ವ್ಯಾಪಾರೋದ್ಯಮಿ ಎಂದು ಸ್ಕ್ಯಾಮಾರ್ ಹೇಳುತ್ತಾನೆ ಮತ್ತು ನೀವು ಮಾಡಬೇಕಾಗಿರುವುದು ಕೇವಲ ಸ್ವಲ್ಪ ಹಣವನ್ನು, ಸಾಮಾನ್ಯವಾಗಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡುವುದು ಮಾತ್ರವಾಗಿರುತ್ತದೆ.

  • ಉದ್ಯೋಗ ನೀಡುವ ನಕಲಿ ಆಫಾರ್

ಸಾಮಾಜಿಕ ಮಾಧ್ಯಮದ ಬಳಕೆದಾರರು ಮುಖ್ಯವಾಗಿ ತಮ್ಮ ಉದ್ಯೋಗದ  ನಿರೀಕ್ಷೆಯನ್ನು ಸುಧಾರಿಸಲು ಅಲ್ಲಿರುತ್ತಾರೆ. ಆದ್ದರಿಂದ ಕೆಲಸದ ಪ್ರಸ್ತಾಪವನ್ನು ಪಡೆಯುವುದು ಅಸಹಜವೇನಲ್ಲ. ಆದಾಗ್ಯೂ, ಕೆಲವು ಸ್ಕ್ಯಾಮರ್ಗಳು ಕೇವಲ ಕೆಲವು ವಾರಗಳವರೆಗೆ ನಿಮ್ಮನ್ನು ಉದ್ಯೋಗಕ್ಕೆ  ತೆಗೆದುಕೊಳ್ಳುತ್ತಾರೆ, ನಿಮ್ಮ ಮೊದಲ ಸಂಬಳಕ್ಕೆ ಕೆಲವು ದಿನಗಳ ಮೊದಲು ನಿಮ್ಮನ್ನು ಕೆಲಸದಿಂದ  ತೆಗೆದುಹಾಕಲಾಗುತ್ತದೆ. ಸಾಮಾನ್ಯವಾಗಿ, ಈ ನಕಲಿ ಕೆಲಸವು ಮನೆಯಿಂದ ಕೆಲಸ ಮಾಡುವ ಅವಕಾಶಕ್ಕೆ ನಿಮಗೆ ಭರವಸೆ ನೀಡುತ್ತದೆ, ಮತ್ತು ಇದರಲ್ಲಿ ಗಮನಾರ್ಹ ಸಂಬಳ ಪ್ಯಾಕೇಜ್ ಕೂಡ ಇರುತ್ತದೆ. ಇತರ ಸಂದರ್ಭಗಳಲ್ಲಿ, ಇದು ಪ್ರಾಜೆಕ್ಟ್-ಆಧಾರಿತ ಕೆಲಸವಾಗಿರಬಹುದು, ಆದ್ದರಿಂದ ನೀವು ಮೊದಲು ಕೆಲಸವನ್ನು ಮಾಡಬೇಕಾಗುತ್ತದೆ, ಮತ್ತು ನಂತರ ನೀವು ಪಾವತಿಯನ್ನು ಪಡೆಯಬೇಕಾಗುತ್ತದೆ. ಆದಾಗ್ಯೂ ನೀವು ಊಹಿಸುವಂತೆ,  ವೇತನವು ಎಂದಿಗೂ ಬರುವುದಿಲ್ಲ.

  • ಚಾರಿಟಿ ಹಗರಣ

ದುರ್ಘಟನೆ ಅಥವಾ ತುರ್ತುಸ್ಥಿತಿ (ಪ್ರವಾಹ, ಚಂಡಮಾರುತ, ಅಥವಾ ಭೂಕಂಪ) ಮುಂತಾದ ಇತ್ತೀಚಿನ ಘಟನೆಗಳಿಗೆ   ಸಹಾಯ ಮಾಡಲು, ಬಲಿಪಶುವನ್ನು ವ್ಯಕ್ತಿಯೊಬ್ಬರಿಗೆ  ಹಣ ವರ್ಗಾವಣೆ ಮೂಲಕ ದಾನಮಾಡುವಂತೆ  ಇಮೇಲ್, ಪೋಸ್ಟ್   ಅಥವಾ ಫೋನ್ ಮೂಲಕ ಸಂಪರ್ಕಿಸುತ್ತಾರೆ.  ಕಾನೂನುಬದ್ಧ ದತ್ತಿ ಸಂಸ್ಥೆಗಳು, ಒಬ್ಬ ವ್ಯಕ್ತಿಗೆ ಹಣ ವರ್ಗಾವಣೆ ಮೂಲಕ ದೇಣಿಗೆಗಳನ್ನು ಕಳಿಸಬೇಕೆಂದು ಎಂದಿಗೂ ಕೇಳುವುದಿಲ್ಲ.

  • ಬಾಡಿಗೆ ಆಸ್ತಿಯ ಹಗರಣ

ಬಲಿಪಶುವು ಬಾಡಿಗೆಯನ್ನು ಪಡೆಯಲು ಠೇವಣಿಗಾಗಿ ಹಣವನ್ನು ಕಳುಹಿಸುತ್ತಾನೆ ಆದರೆ  ಬಾಡಿಗೆ ಮನೆಗೆ   ಪ್ರವೇಶದ ಅನುಮತಿ ಯನ್ನು ಎಂದಿಗೂ ಪಡೆಯುವುದಿಲ್ಲ ಅಥವಾ ಬಲಿಪಶುವು  ಆಸ್ತಿಯ ಮಾಲೀಕನೂ ಕೂಡ ಆಗಿರಬಹುದು, ಅವನು ಬಾಡಿಗೆದಾರನಿಂದ ಚೆಕ್ ಅನ್ನು ಸ್ವೀಕರಿಸುತ್ತಾನೆ ಮತ್ತು ಚೆಕ್ ಅನ್ನು ಬಳಸಿಕೊಂಡು ಹಣದ ವರ್ಗಾವಣೆ ಮಾಡಲು ನೋಡಿದರೆ ಚೆಕ್ ಬೌನ್ಸ್ ಆಗುತ್ತದೆ.

ಆನ್ಲೈನ್ ​​ಸ್ಕ್ಯಾಮ್ಗಳನ್ನು ತಡೆಯಲು ಸಲಹೆಗಳು

  • ಹಗರಣಗಳು ಅಸ್ತಿತ್ವದಲ್ಲಿವೆ ಎಂಬುದರ ಬಗ್ಗೆ  ಎಚ್ಚರವಿರಲಿ.

ಜನರು ಅಥವಾ ಯಾವುದೇ ವ್ಯವಹಾರಗಳಿಂದ ಆಹ್ವಾನಿಸದ ಸಂಪರ್ಕಗಳೊಂದಿಗೆ ಫೋನ್, ಟಪಾಲು, ಇಮೇಲ್ ಮೂಲಕ, ವೈಯಕ್ತಿಕವಾಗಿ ಅಥವಾ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಮೂಲಕ ವ್ಯವಹರಿಸುವಾಗ, ಈ ವಿಧಾನವು ಒಂದು ಸಂಭಾವ್ಯ  ಹಗರಣವಾಗಿರಬಹುದು ಎಂದು  ಯಾವಾಗಲೂ ಪರಿಗಣಿಸಿ.  ನೆನಪಿಡಿ, ಅದು ನಿಜವೆನ್ನುವ ಹಾಗೆ ಸ್ವಲ್ಪ ಹೆಚ್ಚಾಗಿಯೇ  ಗೋಚರವಾಗುತ್ತಿದ್ದರೆ, ಅದು ಬಹುಶಃ.ಹಗರಣವಾಗಿರಬಹುದು.

  • ನೀವು ಯಾರೊಂದಿಗೆ ವ್ಯವಹರಿಸುತ್ತಿರುವಿರಿ ಎಂದು ತಿಳಿದುಕೊಳ್ಳಿ.

ನೀವು ಎಂದಾದರೂ ಕೇವಲ ಆನ್ಲೈನ್ನಲ್ಲಿ ಒಬ್ಬರನ್ನು ಭೇಟಿಯಾಗಿ ಅಥವಾ ವ್ಯಾಪಾರದ ನ್ಯಾಯಸಮ್ಮತತೆಯು ನಿಮಗೆ  ಖಚಿತವಾಗಿರದಿದ್ದರೆ, ಇನ್ನು ಸ್ವಲ್ಪ ಹೆಚ್ಚು ಸಂಶೋಧನೆ ಮಾಡಲು  ಸಮಯ ತೆಗೆದುಕೊಳ್ಳಿ. ಗೂಗಲ್ ಇಮೇಜ್ ನಲ್ಲಿ ಫೋಟೋಗಳನ್ನು  ಹುಡುಕಿ ಅಥವಾ ಅವರೊಂದಿಗೆ ವ್ಯವಹರಿಸಿರಬಹುದಾದ  ಇತರರನ್ನು  ಅಂತರ್ಜಾಲವನ್ನು ಹುಡುಕಿ.

  • ಇಮೇಲ್ ಅನ್ನು ಬ್ಯಾಂಕ್ನಿಂದ ಸ್ವೀಕರಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಿಕೊಳ್ಳಿ

 ಆನ್ಲೈನ್ನಲ್ಲಿ ಬ್ಯಾಂಕ್ ವಿವರಗಳನ್ನು ಒದಗಿಸುವಾಗ ಜಾಗರೂಕರಾಗಿರಿ.  ಆನ್ಲೈನ್ ನಲ್ಲಿ ನಿಮ್ಮ ವಿವರಗಳೊಂದಿಗೆ   ಮತ್ತಷ್ಟು ಮುಂದುವರೆಯುವ ಮುನ್ನ, ನೀವು ಸ್ವೀಕರಿಸಿದ ಇಮೇಲ್ ಕುರಿತು ಬ್ಯಾಂಕಿನೊಂದಿಗೆ ಮತ್ತಷ್ಟು ದೃಢೀಕರಿಸಿಕೊಳ್ಳಿ.  ಏನಾದರೂ  ಮುಖ್ಯ ಕಾರಣ  ಅಥವಾ ತುರ್ತು ಪರಿಸ್ಥಿತಿ ಇದ್ದಲ್ಲಿ  ಇಮೇಲ್ ಕಳುಹಿಸಲು ಬದಲಾಗಿ ಬ್ಯಾಂಕ್ ನನಗೆ ಏಕೆ ನೇರವಾಗಿ ಕರೆಮಾದಿಲ್ಲ  ಎಂದು ಯೋಚಿಸಿ.

  • ಅನುಮಾನಾಸ್ಪದ ಸಂದೇಶಗಳು, ಪಾಪ್-ಅಪ್ ವಿಂಡೋಗಳನ್ನು ತೆರೆಯಬೇಡಿ ಅಥವಾ ಇಮೇಲ್ಗಳಲ್ಲಿನ  ಲಿಂಕ್ಗಳು ​​ಅಥವಾ ಲಗತ್ತುಗಳನ್ನು ಕ್ಲಿಕ್ ಮಾಡಬೇಡಿ - ಅವುಗಳನ್ನು ಡಿಲೀಟ್ ಮಾಡಿ.

 ಖಚಿತವಾಗಿಲ್ಲದಿದ್ದರೆ, ಫೋನ್ ಬುಕ್  ಅಥವಾ ಆನ್ಲೈನ್ ​​ಹುಡುಕಾಟದಂತಹ ಸ್ವತಂತ್ರ ಮೂಲದ ಮೂಲಕ ಸಂಪರ್ಕದ ಗುರುತನ್ನು ಪರಿಶೀಲಿಸಿ. ನಿಮಗೆ ಕಳುಹಿಸಿದ ಸಂದೇಶದಲ್ಲಿ ಒದಗಿಸಿದ ಸಂಪರ್ಕದ ವಿವರಗಳನ್ನು ಬಳಸಬೇಡಿ.

  • ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಗೌಪ್ಯತೆ ಮತ್ತು ಭದ್ರತಾ ಸೆಟ್ಟಿಂಗ್ಗಳನ್ನು ಪರಿಶೀಲಿಸಿ.

ನೀವು ಫೇಸ್ ಬುಕ್ಕಿನಂತಹ ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳನ್ನು ಬಳಸುತ್ತಿದ್ದರೆ, ನೀವು ಸುರಕ್ಷಿತವಾಗಿರುವುದನ್ನು  ಖಾತ್ರಿಪಡಿಸಿಕೊಳ್ಳಲು ನೀವು ಯಾರೊಂದಿಗೆ   ಸಂಪರ್ಕ ಹೊಂದುತ್ತೀರಿ ಎಂಬುದರ ಬಗ್ಗೆ ಗಮನವಿರಲಿ ಮತ್ತು ನಿಮ್ಮ ಗೌಪ್ಯತೆ ಮತ್ತು ಭದ್ರತಾ ಸೆಟ್ಟಿಂಗ್ಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ. ನೀವು ಏನಾದರೂ ಅನುಮಾನಾಸ್ಪದ ವರ್ತನೆಯನ್ನು ಗುರುತಿಸಿದರೆ, ಸ್ಪ್ಯಾಮ್ ಅನ್ನು ಕ್ಲಿಕ್ ಮಾಡಿದರೆ  ಅಥವಾ ಆನ್ಲೈನ್ನಲ್ಲಿ ನಿಮ್ಮನ್ನು ಹಗರಣಕ್ಕೆ ಬಲಿಪಶು ಮಾಡಲಾದರೆ, ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಮತ್ತು ಹಗರಣದ ಬಗ್ಗೆ  ವರದಿ ಮಾಡಲು ಮರೆಯದಿರಿ.

  • ನೀವು ಇಮೇಲ್ ಮೂಲಕ ಸ್ವೀಕರಿಸಿದ ಉತ್ಪನ್ನದ ಬಗ್ಗೆ ತಿಳಿದಿರಲಿ

ರಿಯಾಯಿತಿ ದರದಲ್ಲಿ  ನೀವು ಪಡೆಯುವ ಉತ್ಪನ್ನಗಳ ಬಗ್ಗೆ ನಿಮಗೆ ಅರಿವಿರಲಿ. ನೀವು ಯಾವುದೇ ಆನ್ಲೈನ್ ​​ಶಾಪಿಂಗ್ ಅಥವಾ ಸ್ಪರ್ಧೆಯಲ್ಲಿ ಎಂದಿಗೂ ಭಾಗವಹಿಸದಿದ್ದಾಗ  ನೀವು ಉತ್ಪನ್ನಗಳಿಗಾಗಿ  ಇಮೇಲ್ ಅನ್ನು ಏಕೆ ಸ್ವೀಕರಿಸಿದ್ದೀರಿ ಎಂದು ಯೋಚಿಸಿ.

  • ಲಾಟರಿ / ಉದ್ಯೋಗ ಹಗರಣದಲ್ಲಿ  ಸಿಕ್ಕಿಹಾಕಿಕೊಳ್ಳಬೇಡಿ

ನೀವು ಗೆದ್ದ  ವಿಷಯದೊಂದಿಗೆ  ಬರುವ  ಸ್ಕ್ಯಾಮರ್ಗಳು ಮತ್ತು ಇ-ಮೇಲುಗಳಿಗೆ ಬಲಿಯಾಗಬೇಡಿ.  ನಿಮ್ಮ ಪಾಲ್ಗೊಳ್ಳುವಿಕೆಯಿಲ್ಲದೆ ನೀವು ಮಾತ್ರ ಈ ಇಮೇಲ್ ಅನ್ನು ಏಕೆ ಸ್ವೀಕರಿಸಿದ್ದೀರಿ ಎಂದು ಯೋಚಿಸಿ.

  • ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ ಜಾಗರೂಕರಾಗಿರಿ

ಅತಿಯಾಗಿ ನೈಜವೆಂಬ ರೀತಿಯಲ್ಲಿ ತೋರುವಂತಹ ಕೊಡುಗೆಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಯಾವಾಗಲೂ ನಿಮಗೆ ತಿಳಿದಿರುವ ಹಾಗೂ ವಿಶ್ವಾಸ ಹೊಂದಿರುವ ಆನ್ಲೈನ್ ​​ಶಾಪಿಂಗ್ ಸೇವೆಗಳನ್ನು ಮಾತ್ರ ಬಳಸಿ.

Page Rating (Votes : 1)
Your rating: