ಹೆಚ್ಚಾಗಿ ಸಾಮಾಜಿಕ ಇಂಜಿನಿಯರಿಂಗ್ ಎಂಬುದು ಗೌಪ್ಯ ಮಾಹಿತಿಯ ಹಿಡಿತವನ್ನು ಪಡೆಯಲು ಸೈಬರ್ ಕ್ರಿಮಿನಲ್ ಬಳಸುವ ಪ್ರಾಥಮಿಕ ಹಂತವಾಗಿದೆ. ಬಹುಪಾಲು ಸೈಬರ್ ದಾಳಿಯ ಹಿಂದೆ ಮಾನವನ ಕೈವಾಡ ಇರುವುದು ಅನೇಕ ಬಾರಿ ನಮಗೆ ಅನಿರೀಕ್ಷಿತವಾಗಿರುತ್ತದೆ. ನಕಲು ನಿರೂಪಣೆಯ ಮೂಲಕ ಮಾಹಿತಿಗೆ ಪ್ರವೇಶಿಸುವುದು ಸಾಮಾಜಿಕ ಎಂಜಿನಿಯರಿಂಗ್ ನ ವಿಧಾನವಾಗಿದೆ. ಭದ್ರತಾ ಉಲ್ಲಂಘನೆ ಸಂಭವಿಸುತ್ತಿದೆ ಎಂಬುದು ವಿಕ್ಟಿಮ್ ಗೆ ತಿಳಿಯದಂತೆಯೇ ಜನರ ಮಾಹಿತಿಯನ್ನು ಪಡೆಯುವ ಪ್ರಜ್ಞಾಪೂರ್ವ ಕೌಶಲ್ಯವಾಗಿದೆ. ಇದು ದೂರವಾಣಿ ಮೂಲಕ ಅಥವಾ ವೈಯಕ್ತಿಕವಾಗಿ ಮತ್ತು ಇಮೇಲ್ ಮೂಲಕ ನಕಲು ರೂಪವನ್ನು ಹಾಕುವುದಾಗಿರಬಹುದು. ವೈರಸ್ ಅಥವಾ ದುರುದ್ದೇಶಪೂರಿತ ಕಾರ್ಯಕ್ರಮವನ್ನು ವಿಕ್ಟಿಮಿನ ಕಂಪ್ಯೂಟರ್ನಲ್ಲಿ ಸಕ್ರಿಯಗೊಳಿಸುವ ಲಗತ್ತನ್ನು ತೆರೆಯುವಂತೆ ಕೆಲವು ಇಮೇಲ್ಗಳು ಪ್ರಲೋಭಿಸುತ್ತದೆ. ಸೋಶಿಯಲ್ ಎಂಜಿನಿಯರಿಂಗ್ ಅನ್ನು ಸರಳವಾಗಿ ಹೇಳುವುದಾದರೆ, ಸಾಮಾನ್ಯವಾಗಿ ವ್ಯಕ್ತಿಯು ಕ್ರಿಯೆಯ ನಕಾರಾತ್ಮಕ ಪರಿಣಾಮಗಳನ್ನು ಪರಿಗಣಿಸದೆಯೇ ನಿಮಗೆ ಬೇಕಾಗುವದನ್ನು ಇತರರಿಂದ ಮಾಡಿಸುವಂತೆ ಅನುವು ಮಾಡಿಕೊಡುತ್ತದೆ, ಅಥವಾ ನಿಮಗೆ ಅಗತ್ಯವಿರುವ ಇತರರ ಮಾಹಿತಿಯನ್ನು ನಿಮಗೆ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ತಮಗೆ ಬೀಕಾಗಿದ್ದೂ ಅಥವಾ ಇಲ್ಲದೆಯೋ ಹೆಚ್ಚು ಹೆಚ್ಚು ಮಹಿಳೆಯರು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಅನೇಕ ಹೊಸ ಅಂತರ್ಜಾಲ ಬಳಕೆದಾರರು ಭದ್ರತೆಯ ಬಗ್ಗೆ ತಿಳಿದಿರುವುದಿಲ್ಲ. ಇದು ಡಿಜಿಟಲ್ ಜಗತ್ತು, ಮಹಿಳೆಯರನ್ನು ಗುರಿ ಮಾಡುವುದನ್ನು ಸುಲಭವಾಗಿಸುತ್ತದೆ. ಸಾಮಾಜಿಕ ಇಂಜಿನಿಯರ್ ಸೂಕ್ಷ್ಮ ಗೌಪ್ಯ ಮಾಹಿತಿಯನ್ನು ಪಡೆಯಲು ವಿವಿಧ ವಿಧಾನಗಳ ಮೂಲಕ ಮಹಿಳೆಯರನ್ನು ತಲುಪುತ್ತಾನೆ.

ಸಾಮಾಜಿಕ ಎಂಜಿನಿಯರ್ಗಳು ಮಹಿಳೆಯರನ್ನು ಹೇಗೆ ಗುರಿಯಾಗಿರಿಸುತ್ತಾರೆ

ಸಾರ್ವಜನಿಕ ಸ್ಥಳಗಳು

ಕೆಫೆಗಳು, ಪಬ್ಗಳು, ಚಲನಚಿತ್ರ ಮಂದಿರಗಳು ಅಥವಾ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಎಂಜಿನಿಯರಿಂಗ್ ಅನ್ನು ಮಾಡಬಹುದು. ನೀವು ಆಕಸ್ಮಿಕವಾಗಿ ಕೆಲವು ಸೂಕ್ಷ್ಮ ಮಾಹಿತಿಯನ್ನು ಸಾಮಾಜಿಕ ಎಂಜಿನಿಯರ್ಗೆ ನೀಡಬಹುದು ಅಥವಾ ನಿಮ್ಮಿಂದ ಮಾಹಿತಿಯನ್ನು ಪಡೆಯುವುದಕ್ಕಾಗಿ ನಿಮ್ಮ ಸಂಭಾಷಣೆಯನ್ನು ಯಾರಾದರೂ ಕೇಳಿಸಿಕೊಳ್ಳಬಹುದು.

ಸಾರ್ವಜನಿಕ ಸ್ಥಳಗಳಲ್ಲಿ ಅಸಡ್ಡೆ ಮಾತುಕತೆಯನ್ನು ಆಡಬೇಡಿ.

ಗಾಸಿಪ್ಸ್

ನಿಮ್ಮ ಸ್ನೇಹಿತನೊಂದಿಗೆ ಅಥವಾ ನಿಮ್ಮ ಕಛೇರಿಯಲ್ಲಿ ಒಂದು ಕಾಫಿ ಹಾಗೂ ಕಾಫಿಯ ಮೇಲೆ ನಿಮ್ಮ ಮಾತುಕತೆಗಳು ನಿಮ್ಮ ಅಥವಾ ಇತರರ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಕಾರಣವಾಗಬಹುದು. ಉದಾಹರಣೆಗೆ, ನೀವು ಒಬ್ಬ ವ್ಯಕ್ತಿಯ ಬಗ್ಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಇನ್ನೊಬ್ಬ ವ್ಯಕ್ತಿಯ ಬಗ್ಗೆಗಿನ ಕೆಲವು ಮಾಹಿತಿಯನ್ನು ನೀವು ಸಾಮಾಜಿಕ ಎಂಜಿನಿಯರ್ ಗೆ ನೀಡಬಹುದು. ಪ್ರಸ್ತುತ ಪರಿಸ್ಥಿತಿಯ ಸೈಬರ್ ಸ್ಪೇಸ್ ನಲ್ಲಿ ಈ ಸಾಂದರ್ಭಿಕ ಮಾತುಕತೆಗಳು ಸೈಬರ್ ಬೆದರಿಕೆಗಳಿಗೆ ಕಾರಣವಾಗಬಹುದು.

ಗಾಸಿಪ್ ಮಾಡುವುದು ಸರಿಯಲ್ಲ, ನಿಮ್ಮ ಶತ್ರು ಅಥವಾ ಸ್ನೇಹಿತನ ವಿವರಗಳನ್ನು ಪಡೆದುಕೊಳ್ಳಲು ಸಾಮಾಜಿಕ ಎಂಜಿನಿಯರ್ಗೆ ಸಹಾಯ ಮಾಡವಲ್ಲಿ ಅದು ಕೊನೆಗೊಳ್ಳಬಹುದು. ಅಪರಿಚಿತರೊಂದಿಗೆ ಗಾಸಿಪ್ ಮಾಡಬೇಡಿ.

ವೈಯಕ್ತಿಕ ಗರ್ವ ಅಥವಾ ವಿಶ್ವಾಸ

ಅಜ್ಞಾತ ವ್ಯಕ್ತಿಗಳಿಗೆ ನಿಮ್ಮ ಸಾಧನೆಗಳನ್ನು ಹೇಳಿಕೊಳ್ಳಲು, ಹೆಮ್ಮೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು ನಿಮ್ಮ ಕುಟುಂಬ ಅಥವಾ ಸಂಸ್ಥೆಯ ಸೂಕ್ಷ್ಮ ಮಾಹಿತಿಯನ್ನು ನೀವು ನೀಡಬಹುದು. ಸಾಮಾಜಿಕ ಇಂಜಿನಿಯರ್ ತನ್ನ ವ್ಯವಹಾರದ ಅಗತ್ಯಗಳನ್ನು ಪ್ರಸ್ತುತಪಡಿಸಲು ನಿಮ್ಮ ಸಂಸ್ಥೆಗೆ ಬರಬಹುದು ಮತ್ತು ಸೂಕ್ಷ್ಮ ನೆಟ್ವರ್ಕ್ ಮಾಹಿತಿಯನ್ನು ಕೇಳಬಹುದು. ನೀವು ನೆಟ್ವರ್ಕ್ ನಿರ್ವಾಹಕರಾಗಿದ್ದರೆ ನಿಮ್ಮ ಸಂಸ್ಥೆಗೆ ಸಂಬಂಧಿಸಿದ ಯಾವುದೇ ನೆಟ್ವರ್ಕ್ ಸಂಬಂಧಿತ ಮಾಹಿತಿಯನ್ನು ಬಹಿರಂಗಪಡಿಸುವ ಮೊದಲು ನೀವು ಜಾಗ್ರತೆಯಿಂದಿರಬೇಕು.

ನಿಮ್ಮ ಸಂಸ್ಥೆಯ ಸೂಕ್ಷ್ಮ ಮಾಹಿತಿಯನ್ನು ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ಅಪರಿಚಿತರೊಂದಿಗೆ ಚರ್ಚಿಸುವಾಗ ಎಚ್ಚರವಿರಲಿ.

ಆನ್ಲೈನ್

ಸಾಮಾಜಿಕ ಎಂಜಿನಿಯರ್ಗಳು ನೆಟ್ವರ್ಕ್ ನಿರ್ವಾಹಕರಂತೆ ನಟಿಸಿ, ಇ-ಮೇಲ್ ಅನ್ನು ನೆಟ್ವರ್ಕ್ ಮೂಲಕ ಕಳುಹಿಸಬಹುದು ಮತ್ತು ಪರೋಕ್ಷವಾಗಿ ಬಳಕೆದಾರ ಪಾಸ್ವರ್ಡ್ ಅಥವಾ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಕೇಳುವ  ಮೂಲಕ ಆನ್-ಲೈನ್ ಮಾಹಿತಿಯನ್ನು ಪಡೆಯಬಹುದು. ಸಾಮಾಜಿಕ ಎಂಜಿನಿಯರಿಂಗ್ ಮೂಲಭೂತ ಗುರಿಗಳು ಸಾಮಾನ್ಯವಾಗಿ ಹ್ಯಾಕಿಂಗ್ನಂತೆಯೇ ಇರುತ್ತದೆ: ಇದರ ಉದ್ದೇಶವು ಸಿಸ್ಟಮ್ ಮತ್ತು ನೆಟ್ವರ್ಕ್ಗೆ ಅನಧಿಕೃತ ಪ್ರವೇಶವನ್ನು ಪಡೆಯುವುದು ಅಥವಾ ನೆಟ್ವರ್ಕಿನಲ್ಲಿ ಅನಧಿಕೃತ ಸೇರ್ಪಡೆ, ಗುರುತಿನ ಕಳ್ಳತನ ಅಥವಾ ಕೇವಲ ಸಿಸ್ಟಂ ಮತ್ತು ನೆಟ್ವರ್ಕನ್ನು ಹಾಳುಗೆಡುವುದಾಗಿರುತ್ತದೆ.

ನಿಮ್ಮ ಪಾಸ್ವರ್ಡ್ ಅನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳಬೇಡಿ

ವಿಶಿಂಗ್

ದು ಟೆಲಿಫೋನ್ ಸಿಸ್ಟಮ್ನ ಬಳಸಿ ಮಾಡುವ ಸಾಮಾಜಿಕ ಇಂಜಿನಿಯರಿಂಗ್ ವಿಧಾನವಾಗಿದ್ದು, ಇದು ಹಣಕಾಸನ್ನು ಲಪಟಾಯಿಸುವ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಪಡೆಯಲು ಹೆಚ್ಚಾಗಿ ವಾಯ್ಸ್ ಓವರ್ ಐಪಿ (VoIP)ಯ ಸೌಲಭ್ಯಗಳನ್ನು ಬಳಸಲಾಗುತ್ತದೆ. ಈ ಪದವು "ವಾಯ್ಸ್ (ಧ್ವನಿ)" ಮತ್ತು ಫಿಶಿಂಗ್ಗಳ ಸಂಯೋಜನೆಯಾಗಿದೆ.

ಫೋನ್ ಮೂಲಕ ಅಪರಿಚಿತ ಜನರಿಗೆ ಯಾವುದೇ ಹಣಕಾಸಿನ ಮಾಹಿತಿಯನ್ನು ನೀಡಬೇಡಿ; ನೀವು ಮಾತನಾಡುವ  ವಿಚಾರಣೆ ಮಾಡುವವರ ವಿವರಗಳನ್ನು ದೃಢೀಕರಿಸಿ ಮತ್ತು ಯಾವುದೇ ಮಾಹಿತಿಯನ್ನು ನೀಡುವ ಮೊದಲು ಸಂಬಂಧಿತ ಕಂಪೆನಿ ಅಥವಾ ಬ್ಯಾಂಕ್ನೊಂದಿಗೆ ಕೂಡ ಪರಿಶೀಲಿಸಿ.

ಫಿಶಿಂಗ್

ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಪಾಸ್ವರ್ಡ್ಗಳು, ಖಾತೆ ಡೇಟಾ ಮತ್ತು ಇತರ ಮಾಹಿತಿಗಳಂತಹ ನಿಮ್ಮ ಅಮೂಲ್ಯವಾದ ವೈಯಕ್ತಿಕ ಡೇಟಾವನ್ನು ಕದಿಯಲು ವಿನ್ಯಾಸಗೊಳಿಸಿದ ವಂಚನೆಯ ವಿಧಾನವು ಫಿಶಿಂಗ್ ಆಗಿದೆ. ದಾಳಿಕೋರರು ಹೆಚ್ಚು ಹೆಚ್ಚು ಅತ್ಯಾಧುನಿಕವಾಗುತ್ತಿದ್ದಾರೆ ಹಾಗೂ ಅದೇ ರೀತಿಯಲ್ಲಿ ಅವರ ಫಿಶಿಂಗ್ ಇ-ಮೇಲ್ ಸಂದೇಶಗಳು ಮತ್ತು ಪಾಪ್-ಅಪ್ ವಿಂಡೋಗಳನ್ನು ಕೂಡಾ ಅತ್ಯಾಧುನಿಕವಾಗಿರುತ್ತದೆ. ನೈಜ ಸಂಸ್ಥೆಗಳಿಂದ ಅಧಿಕೃತವಾಗಿ ಕಾಣುವಂತಹ ಲೋಗೋಗಳನ್ನು ಮತ್ತು ಕಾನೂನುಬದ್ಧ ವೆಬ್ ಸೈಟ್ಗಳಿಂದ ನೇರವಾಗಿ ತೆಗೆದುಕೊಂಡ ಇತರ ಗುರುತಿಸುವ ಮಾಹಿತಿಯನ್ನು ಅವುಗಳು ಹೆಚ್ಚಾಗಿ ಒಳಗೊಂಡಿರುತ್ತವೆ.

ನೀವು ಫಿಶಿಂಗ್ ಇಮೇಲ್ ಸಂದೇಶವನ್ನು ಸ್ವೀಕರಿಸಿದ್ದೀರಿ ಎಂದು ನೀವು ಭಾವಿಸಿದರೆ, ಅದಕ್ಕೆ ಪ್ರತಿಕ್ರಿಯಿಸಬೇಡಿ; ಮತ್ತು ಅಜ್ಞಾತ ಬಳಕೆದಾರರಿಂದ ನೀವು ಪಡೆದ ಲಿಂಕ್ಗಳನ್ನು ಸಹ ಕ್ಲಿಕ್ ಮಾಡಬೇಡಿ.

ಬೈಟಿಂಗ್

ಸಾಮಾಜಿಕ ಎಂಜಿನಿಯರಿಂಗ್ ವಿಧಾನಗಳಲ್ಲಿ ಇದು ಭೌತಿಕ ಮಾಧ್ಯಮವನ್ನು ಬಳಸುತ್ತದೆ ಮತ್ತು ಇದು ವಿಕ್ಟಿಮ್ ನ ಕುತೂಹಲ ಅಥವಾ ದುರಾಶೆಯ ಮೇಲೆ ಅವಲಂಬಿತವಾಗಿದೆ. ಇಲ್ಲಿ ಆಕ್ರಮಣಕಾರರು ಮಾಲ್ವೇರ್ ಅನ್ನು ಸೇರಿಸಿದ ಅಥವಾ ಸೋಂಕಿತ ಯುಎಸ್ಬಿ ಅಥವಾ ಪೆನ್ ಡ್ರೈವ್, ಸಿಡಿ / ಡಿವಿಡಿ ರಾಮ್ ಅನ್ನು ಕಾಣುವ ಸ್ಥಳದಲ್ಲಿ ಇಡುತ್ತಾರೆ ಹಾಗೂ ನೈಜವಾಗಿ ಕಾಣುವಂತೆ ಏರ್ಪಾಡು ಮಾಡುತ್ತಾರೆ. ಇದರಿಂದ ವಿಕ್ಟಿಮ್ ನ ಕುತೂಹಲವು ಕೆರಳುವಂತೆ ಮಾಡಿ ಮತ್ತು ಅವರು ಆ ಸಾಧನವನ್ನು ಬಳಸುವುದನ್ನು ಕಾಯುತ್ತಿರುತ್ತಾರೆ.

ಪಾದಚಾರಿ ಹಾದಿ, ಎಲಿವೇಟರ್, ಪಾರ್ಕಿಂಗ್ ಲಾಟ್ ಇತ್ಯಾದಿಗಳಲ್ಲಿ ನಿರ್ಲಕ್ಷಿಸಿದಂತೆ ಕಂಡುಬರುವ ಸಾಧನಗಳನ್ನು ಉಪಯೋಗಿಸಲು ಪ್ರಚೋದನೆಗೆ ಒಳಗಾಗಬೇಡಿ.

ಮನವೊಲಿಸುವುದು

ನೀವು ವಿಶ್ವಾಸಾರ್ಹವೆಂದು ತೋರ್ಪಡಿಸಿ ಅಥವಾ ಕೇವಲ ಕೇಳುವುದರ ಮೂಲಕವೇ ಬೇರೆಯವರು ನಿಮ್ಮನ್ನು ನಂಬಿಕಾರ್ಹರೆಂದುನಂಬುವಂತೆ ಮಾಡುವ ಮೂಲಕ ಇತರರು ಗೌಪ್ಯ ಮಾಹಿತಿಯನ್ನು ಕೊಡುವಂತೆ ಪ್ರಭಾವ ಬೀರುವುದು. ಸಾಮಾಜಿಕ ಇಂಜಿನಿಯರ್ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮ ವೈಯಕ್ತಿಕ ಮಾಹಿತಿ, ನಿಮ್ಮ ಶಾಲೆ, ಸಂಸ್ಥೆ ಇತ್ಯಾದಿ ಬಗ್ಗೆ ಮಾಹಿತಿಯನ್ನು ತಿಳಿಯಲು ಪ್ರಶ್ನೆಗಳನ್ನು ಕೇಳಬಹುದು.

 ಸಂದೇಹಾಸ್ಪದವಾಗಿ ಕಂಡುಬಂದಲ್ಲಿ ಆಕರ್ಷಕ ಕೊಡುಗೆಗಳಿಗೆ ಪ್ರಭಾವವಿತರಾಗಬೇಡಿ  ಮತ್ತು ಬೇರೆಯವರಿಗೆ ನಿಮ್ಮ ಗೌಪ್ಯ ಮಾಹಿತಿಯನ್ನು ನೀಡಬೇಡಿ.

ಡಂಪ್ಸ್ಟರ್ ಡೈವಿಂಗ್

ಡಂಪ್ಸ್ಟರ್ ಡೈವಿಂಗ್, ಟ್ರ್ಯಾಶಿಂಗ್ ಎಂದು ಸಹ ಕರೆಯಲ್ಪಡುವ, ಇದು ಸಾಮಾಜಿಕ ಎಂಜಿನಿಯರಿಂಗ್ನ ಮತ್ತೊಂದು ಜನಪ್ರಿಯ ವಿಧಾನವಾಗಿದೆ. ಕಂಪೆನಿಯ ಕಸ ಅಥವಾ ಮನೆಯ ತ್ಯಾಜ್ಯ ವಸ್ತುವಿನ ಮೂಲಕ ಸಾಕಷ್ಟು ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.

ಯಾವುದೇ ಗೌಪ್ಯವಾದ ಕಾಗದಗಳನ್ನು ಕಸದೊಳಗೆ ಹಾಕಬೇಡಿ, ಕಸಕ್ಕೆ ಹಾಕುವ ಮೊದಲು ಅದರಲ್ಲಿ ನೀವು ಯಾವುದೇ ಪ್ರಮುಖ ಮಾಹಿತಿಯನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹೊಕ್ಸಿಂಗ್

ಒಂದು ಹೋಕ್ಸ್ ಎಂಬುದು ಜನರು ಸುಳ್ಳನ್ನು ನೈಜವೆಂದು  ನಂಬಿಸುವ ಪ್ರಯತ್ನವಾಗಿದೆ. ಇದು ಸಾಮಾನ್ಯವಾಗಿ ಒಂದು ಬಲಿಪಶುವನ್ನು ಗುರಿಯಾಗಿಟ್ಟುಕೊಂಡು ಕಾನೂನುಬಾಹಿರ ಆರ್ಥಿಕ ಅಥವಾ ವಸ್ತು ಲಾಭಕ್ಕಾಗಿ ಮಾಡಲಾಗುತ್ತದೆ. ಹೋಕ್ಸ್ ಅನ್ನು ತಮಾಷೆಗಾಗಿ ಪ್ರಾಯೋಗಿಕ ಹಾಸ್ಯವನ್ನಾಗಿ ಮಾಡಿ ಇತರರಿಗೆ ಅವಮಾನ ಉಂಟುಮಾಡುತ್ತದೆ.

ಅಜ್ಞಾತ ವಿಳಾಸದಿಂದ ಪಡೆದ ಇ-ಮೇಲ್ಗಳನ್ನು ನಂಬಬೇಡಿ ಮತ್ತು ಹಣಕಾಸಿನ ಮಾಹಿತಿಯನ್ನು ಎಂದಿಗೂ ನೀಡಬೇಡಿ.

(ಪ್ರಿ-ಟೆಕ್ಸ್ ಟಿಂಗ್) ಸಬೂಬು ಹೇಳುವುದು

ಗುರಿಗೆ ಒಳಗಾದ ಬಲಿಪಶುವಿಂದ ಹೆಚ್ಚೆಚ್ಚು ಮಾಹಿತಿಯನ್ನು ಬಹಿರಂಗಪಡಿಸುವ ಅಥವಾ ಸಾಮಾನ್ಯ ಸಂದರ್ಭಗಳಲ್ಲಿ ಅಸಂಭವವಾದ ಕಾರ್ಯಗಳನ್ನು ಮಾಡುವ ಅವಕಾಶವನ್ನು ಹೆಚ್ಚಿಸುವ ರೀತಿಯಲ್ಲಿ ತೊಡಗಿಸಿಕೊಳ್ಳಲು ಕಾಲ್ಪನಿಕ ಸನ್ನಿವೇಶವನ್ನು ರಚಿಸುವ ಮತ್ತು ಬಳಸುವ ಕ್ರಿಯೆಯನ್ನು ಪ್ರಿ- ಟೆಕ್ಸ್ ಟಿಂಗ್ ಎನ್ನಲಾಗುತ್ತದೆ. ಇದು ಸರಳವಾದ ಸುಳ್ಳುಗಿಂತಲೂ ಹೆಚ್ಚು ಅಪಾಯಕಾರಿ.

ಎಚ್ಚರದಿಂದಿರಿ ಏಕೆಂದರೆ ಅಪರಿಚಿತರು ಸುಳ್ಳು ಪರಿಸ್ಥಿತಿಯನ್ನು ರಚಿಸುವ ಮೂಲಕ ನಿಮ್ಮನ್ನು ಮರುಳು ಮಾಡಲು ಪ್ರಯತ್ನಿಸುತ್ತಾರೆ ಮತ್ತು ಗೌಪ್ಯ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ನಿಮ್ಮನ್ನು ನಂಬಿಸುವಂತೆ ಮಾಡುತ್ತಾರೆ.

Page Rating (Votes : 1)
Your rating: